ಕುಕ್ಕೇ ಸುಬ್ರಹ್ಮಣ್ಯ ಕುಮಾರಧಾರ ಸೇತುವೆಯ ಮೇಲೆ ಸುಮಾರು ಮೂರು ತಿಂಗಳುಗಳಿಂದ ಜಾಕೆಟ್ ಹಾಕಿಕೊಂಡು ಮೈಮೇಲೆ ಸಿಕ್ಕ ಸಿಕ್ಕ ಬಟ್ಟೆಗಳನ್ನು ಹೊದ್ದುಕೊಂಡು,ಹರಿದ ಬಟ್ಟೆಗಳ ಮೂಲಕ ಅಲೆದಾಡುತ್ತಿದ್ದ, ಮಾನಸಿಕ ಅಸ್ವಸ್ಥ ಯುವಕನನ್ನು ರಕ್ಷಣೆ ಮಾಡಿ ಸ್ನೇಹಾಲಯ ಮಾನಸಿಕ ಅಸ್ವಸ್ಥರ ಕೇಂದ್ರಕ್ಕೆ ದಾಖಲಿಸಲಾಗಿದೆ.

ಹಿಂದಿಯಲ್ಲಿ ಮಾತನಾಡುವ ಈ ಯುವಕ ಪಕ್ಕದ ಹೋಟೆಲ್ ನವರು ಕೊಡುವ ಆಹಾರಗಳನ್ನು ತಿನ್ನುತ್ತಿದ್ದ.

ಕುಕ್ಕೇ ಸುಬ್ರಹ್ಮಣ್ಯಕ್ಕೆ ಬರುವ ಭಕ್ತರಲ್ಲಿ ಗಲಾಟೆ ಮಾಡಿ ದುಡ್ಡು ಕೊಡಿ ಎಂದು ಕೇಳುತ್ತಿದ್ದ. ಈತನ ವರ್ತನೆ ನೋಡಿ ದೇವಸ್ಥಾನಕ್ಕೆ ಬರುವ ಪ್ರವಾಸಿಗರು ಭಯಪಡುತಿದ್ದರು, ಹಲವಾರುಪ್ರವಾಸಿಗರು ಈ ಮಾನಸಿಕ ರೋಗಿಗೆ ಹೊಡೆದ ಸನ್ನಿವೇಶಗಳೂ ನಡೆದಿವೆಯಂತೆ.

ರಾತ್ರಿ ಹಗಲು ಎನ್ನದೆ ಬಿಸಿಲಿನಲ್ಲಿ ಅಲೆದಾಡಿಕೊಂಡು, ಸೇತುವೆಯ ಮೇಲೆ ಮಲಗುತ್ತಿದ್ದ, ಈ ವಿಚಾರವನ್ನು ಗಮನಿಸಿದ ಸುಬ್ರಹ್ಮಣ್ಯ ಗ್ರಾಮಪಂಚಾಯತ್ ಅಭಿವೃದ್ಧಿ ಅಧಿಕಾರಿ ಮುತ್ತಪ್ಪ, ಪೊಲೀಸ್ ಸಿಬ್ಬಂದಿ ಸಂಧ್ಯಾ ಮಣಿ, ಸುಬ್ರಹ್ಮಣ್ಯದ ಕೆಲವು ಮಾಧ್ಯಮ ವರದಿಗಾರರು ಸೇರಿ ಈತನನ್ನು ಮಂಜೇಶ್ವರದ ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನರ್ ಚೇತನ ಕೇಂದ್ರಕ್ಕೆ ದಾಖಲಿಸುವ ಮೂಲಕ ರಕ್ಷಣೆ ಮಾಡಿದ್ದಾರೆ.

ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನರ್ ಚೇತನ ಕೇಂದ್ರದ ಮುಖ್ಯಸ್ಥ ಜೋಸೆಫ್, ಸಿಬ್ಬಂದಿಗಳಾದ ಜೋವಿಯಲ್, ಸಂದೀಪ್, ಆಲ್ವಿನ್ ಮುತುವರ್ಜಿಯಲ್ಲಿ ಮಾನಸಿಕ ಅಸ್ವಸ್ಥ ಯುವಕನ ಆರೈಕೆ ಮಾಡಲಾಗುತ್ತಿದ್ದು, ಯುವಕ ಸಾಮಾನ್ಯ ಸ್ಥಿತಿಗೆ ಮರಳಿದ ನಂತರ ಮನೆಯವರನ್ನು ಸಂಪರ್ಕಿಸಲಾಗುವುದು ಎಂದು ಸ್ನೇಹಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

 

NEWS LINK: https://emungaru.com/?p=43015

Home | About | NewsSitemapTerms and Conditions / Refund Policy | Contact

Copyright ©2014 www.snehalayamangalore.com.
Powered by eCreators

Contact Us :

Snehalaya Charitable Trust (R)

Head Office :

Door No. 15 - 21 / 1307 / 2,
Mascarenhas Compound,
2nd Cross Lower Bendoor,
Near Colaco Hospital, Kankanady Post,
Mangalore - 575 002

Operational Office:

D.No.: IV - 239 / H,
Bachalike, Pavoor Post,
Manjeshwar,
Kasargod District,
Kerala - 671 323

 

 

Tel. Ph.: (Land & Fax)
04998 - 273322
Mob.: 09446547033, 9036451931
Email: [email protected]