Nov 29, 2019 : Gangaram, who lost everything and everyone from drug addiction, has now regained everything and is living a beautiful life. He recognizes that "the Snehalaya made me live, and I could never fall into a bad habit. There is nothing more beautiful than living with a wife and children." The unexpected arrival of Gangaram, created a festive spirit in the family. 

Mr. Gangaram, aged 45 years, a resident of Amaravati district of Maharashtra, from his very early days he became addicted to alcohol. His wages drained only for his drinks. His wife, children and family members were fed up and lost everything. Then he had migrated to Mangalore along with his wife and family. He had also hired a small rented house. But, upon arrival to Mangalore there was no change in Gangaram's situation. 

One day he has gone for shop to buy some items.. But instead he has gone to wine shop. Due to over drinking, his state of mind started losing memory, became inactive, ferocious and helpless & started to raom in the street. His wife and children waiting at home. Days gone.. But Gangaram did not return at home. Then his wife and children returned to their hometown without finding a way out. 

Mr. Gangaram was brought to Snehalaya by the officials of Kankanadi Town Police station, Mangaluru in a very bad condition. He was uncontrollable & hyper active in nature. He was clothed in rags, unshaved beard, and ferocious looks, un-bathed for months, stinky to the core. He was heard murmuring on his own. He was bathed and admitted for treatment at Yenepoya Hospital, He responded to treatment and the care by disclosing his address and family details, and then there was no delay in reuniting him with his family after a gap of 6 months.

He was safely shifted to Shraddha Rehabilitation Foundation, Mumbai last week. From there he re-united with his family. The wife and children were delighted. Now, Gangaram has taken an oath. Alcohol has no place in his life.


ಸ್ನೇಹಮನೆಯಿಂದಾಗಿ ಬದುಕಿದೆ...... ಇಲ್ಲವಾದಲ್ಲಿ ಮದ್ಯ ನನ್ನನ್ನು ಸಾಯಿಸುತ್ತಿತ್ತು

ಕುಡಿತದ ಚಟದಿಂದಲೇ ಸಕಲರನ್ನೂ ಸರ್ವವನ್ನೂ ಕಳೆದುಕೊಂಡಿದ್ದ ಗಂಗಾರಾಮ್ ಈಗ ಎಲ್ಲವನ್ನು ಮರಳಿ ಗಳಿಸಿ ಸುಂದರ ಬದುಕನ್ನು ನೇಯತೊಡಗಿದ್ದಾರೆ. "ಸ್ನೇಹಾಲಯ ನನ್ನನ್ನು ಬದುಕಿಸಿತು, ಇನ್ನೆಂದೂ ಕೆಟ್ಟ ಚಟಕ್ಕೆ ಬೀಳಲಾರೆ. ಪತ್ನಿ, ಮಕ್ಕಳ ಜೊತೆಗಿನ ಜೀವನಕ್ಕಿಂತ ಸುಂದರವಾದುದು ಬೇರೊಂದೂ ಇಲ್ಲ" ಎಂದು ಆತ ಗುರುತಿಸಿಕೊಂಡಿದ್ದಾರೆ. ನಿಗೂಢ ನಾಪತ್ತೆಯಾಗಿದ್ದ ಗಂಗಾರಾಮ್ನ ಅನಿರೀಕ್ಷಿತ ಆಗಮನ, ಅವರ ಸತ್ ಬದಲಾವಣೆಯು ಆ ಕುಟುಂಬದಲ್ಲಿ ಹಬ್ಬದ ಪ್ರತೀತಿಯನ್ನೇ ಸೃಷ್ಟಿಸಿದೆ. ಅಷ್ಟಕ್ಕೆ ದುರಂತಮಯವಾಗಿತ್ತು, ಅವರ ಭೂತಕಾಲ.

ಮಹಾರಾಷ್ಟ್ರದ ಅಮರಾವತಿ ಜಿಲ್ಲೆ ನಿವಾಸಿ ಕೂಲಿ ಕಾಮರ್ಿಕ ಗಂಗಾರಾಮ್ (45) ಚಿಕ್ಕಂದಿನಿಂದಲೇ ಮದ್ಯ ಸೇವನೆಯ ಚಟ ಬೆಳೆಸಿಕೊಂಡಿದ್ದ. ಬೆಳೆದಂತೆ ಈ ಕೆಟ್ಟ ಚಾಳಿಯೂ ವಿಪರೀತವಾಗಿ ಬೆಳೆಯುತ್ತಿತ್ತು. ಆತನಿಗೆ ಲಂಗು ಲಗಾಮು ಹಾಕುವವರಿರಲಿಲ್ಲ. ಇದರಿಂದಾಗಿ ಆತ ಸಂಚರಿಸಿದ್ದೇ ಆತನಿಗೆ ದಾರಿಯಾಗಿತ್ತು. ದುಡಿದ ಹಣವನ್ನು ಸಂಪೂರ್ಣವಾಗಿ ಸಾರಾಯಿ ಸೇವೆನೆಗೆ ಬಳಸುತ್ತಿದ್ದ. ಬೆಳಿಗ್ಗೆ ಎದ್ದೊಡನೆ ಕುಡಿತದ್ದೇ ನೆನಪು. ಮನೆಯಲ್ಲಿ ಗಲಾಟೆ ನಿತ್ಯ ಸಂಭವವಾಯಿತು, ಅಶಾಂತಿ ಮನೆ ಮಾಡಿತು. ಊರಿನಲ್ಲಿ ಸಾಲಸೋಲ ಆಗಿ ನಿಲ್ಲಲಾರದ ಪರಿಸ್ಥಿತಿ ನಿಮರ್ಾಣವಾಯಿತು. ಹಾಗೆ, ಪತ್ನಿ ಸಹಿತ ಕುಟುಂಬಿಕರ ಜೊತೆಗೆ ಇತ್ತ ಮಂಗಳೂರಿಗೆ ವಲಸೆ ಬಂದಿದ್ದ. ಪುಟ್ಟ ಬಾಡಿಗೆ ಮನೆಯೊಂದನ್ನು ಗೊತ್ತುಪಡಿಸಿ ಕೂಲಿ ಕೆಲಸವನ್ನೂ ದೊರಕಿಸಿಕೊಂಡಿದ್ದ. ಆದರೆ, ಹುಟ್ಟುಗುಣ ಗಟ್ಟ ಹತ್ತಿದರೂ ಬಿಡುವುದೇ...? ಗಂಗಾರಾಮ್ನ ಪರಿಸ್ಥಿತಿಯಲ್ಲಿ ಯಾವುದೇ ಬದಲಾವಣೆ ಕಾಣಲಿಲ್ಲ.

ಒಂದು ದಿನ ಸಾಮಗ್ರಿ ಖರೀದಿಸಲೆಂದು ಮನೆಯಿಂದ ಹೊರಟಾತ ನೇರ ವೈನ್ಶಾಪ್ಗೆ ಹೊಕ್ಕಿದ್ದ. ಕರುಳು ಪೂತರ್ಿ ಕುಡಿದು ನಡೆಯಲಾರದೆ ರಸ್ತೆ ಬದಿಯಲ್ಲೇ ಒರಗಿದ್ದ. ಎದ್ದಾಗ ದಿಢೀರ್ ಮನಸ್ಸಿನ ಹತೋಟಿ ತಪ್ಪಿ ಎಲ್ಲವನ್ನೂ ಮರೆತಿದ್ದ. ದಿಕ್ಕು ಗತಿ ಅರಿಯದೆ ಎತ್ತಲೋ ನಡೆದಿದ್ದ...... ಇತ್ತ, ಕುಟುಂಬಿಕರು ಇಡೀ ನಗರದಲ್ಲಿ ಆತನಿಗಾಗಿ ಹುಡುಕಾಡಿ ಫಲ ಕಾಣಲಿಲ್ಲ. ಕೊನೆಗೆ, ಅನ್ಯ ದಾರಿ ಕಾಣದೆ ಅವರೆಲ್ಲರೂ ಗಂಟುಮೂಟೆ ಕಟ್ಟಿ ಊರಿಗೆ ಮರಳಿದ್ದರು.

2019 ರ ಜೂನ್ ಒಂಭತ್ತು ಗಂಗಾರಂ ಅವರನ್ನು ಮಂಗಳೂರಿನ ಕಂಕನಾಡಿ ಟೌನ್ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ನೇಹಾಲಯಕ್ಕೆ ಕರೆತಂದರು. ಅವರು ನಿಯಂತ್ರಿಸಲಾಗದ ಸ್ಥಿತಿ. ಅವನು ಚಿಂದಿ ಬಟ್ಟೆ, ಕತ್ತರಿಸದ ಗಡ್ಡ, ಮತ್ತು ಉಗ್ರ ನೋಟ, ತಿಂಗಳುಗಟ್ಟಲೆ ಸ್ನಾನ ಮಾಡದ ದೇಹ. ಅವನು ಸ್ವಂತವಾಗಿ ಗೊಣಗುತ್ತಿದ್ದನು. ಅವರನ್ನು ಸ್ನಾನ ಮಾಡಿ ಯೆನೆಪೊಯಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಯಿತು, ಅವರು ತಮ್ಮ ವಿಳಾಸ ಮತ್ತು ಕುಟುಂಬದ ವಿವರಗಳನ್ನು ಬಹಿರಂಗಪಡಿಸುವ ಮೂಲಕ ಚಿಕಿತ್ಸೆ ಮತ್ತು ಆರೈಕೆಗೆ ಪ್ರತಿಕ್ರಿಯಿಸಿದರು, ಮತ್ತು ನಂತರ 6 ತಿಂಗಳ ಅಂತರದ ನಂತರ ಅವರನ್ನು ಕುಟುಂಬದೊಂದಿಗೆ ಮತ್ತೆ ಒಗ್ಗೂಡಿಸಲು ಯಾವುದೇ ವಿಳಂಬವಾಗಳಿಲ್ಲ.ಮುಂಬಯಿಯ ಶ್ರದ್ಧಾ ಪುನಶ್ಚೇತನ ಕೇಂದ್ರದ ಮೂಲಕ ಕಳೆದ ವಾರ ಆತನನ್ನು ಸುರಕ್ಷಿತವಾಗಿ ಮಹಾರಾಷ್ಟ್ರದ ಮನೆಗೆ ಸೇರಿಸಲಾಯಿತು. ಪತ್ನಿ, ಮಕ್ಕಳು ಆನಂದಭಾಷ್ಪ ಹರಿಸಿದರು. ಈಗ, ಗಂಗಾರಾಮ್ ಶಪಥ ತೊಟ್ಟಿದ್ದಾರೆ. ತನ್ನ ಬದುಕಿನಲ್ಲಿ ಮದ್ಯಕ್ಕಿನ್ನು ಸ್ಥಾನವಿಲ್ಲವೆಂದು.........

Comments powered by CComment

Home | About | NewsSitemapTerms and Conditions / Refund Policy | Contact

Copyright ©2014 www.snehalayamangalore.com.
Powered by eCreators

Contact Us :

Snehalaya Charitable Trust (R)

Head Office :

Door No. 15 - 21 / 1307 / 2,
Mascarenhas Compound,
2nd Cross Lower Bendoor,
Near Colaco Hospital, Kankanady Post,
Mangalore - 575 002

Operational Office:

D.No.: IV - 239 / H,
Bachalike, Pavoor Post,
Manjeshwar,
Kasargod District,
Kerala - 671 323

 

 

Tel. Ph.: (Land & Fax)
04998 - 273322
Mob.: 09446547033, 9036451931
Email: [email protected]