On 18-6-2019 we welcomed new member to Snehalaya family Venkatamma [65 years] from Bangalore. In order to end up her life She jumped into the sea at Panambur in the afternoon. The lifeguard saved her and was handed over to the Panambur police. Police found that she is mentally ill and brought to Snehalaya. After the psychiatric treatment she will be reunited with her family.


 

 

ಸಾಯಲು ಹೋದಾಕೆ ಸ್ನೇಹಾಲಯದ ಪ್ರೀತಿಯ ತೆಕ್ಕೆಗೆ-ವೆಂಕಟಮ್ಮನಿಗಿನ್ನು ಸಂಕಟವಿರದು...

ಆಕೆ ವೆಂಕಟಮ್ಮ. ಸುಮಾರು 65 ವರ್ಷ ಹರೆಯ. ಊರು ಕೇಳಿದರೆ ಬೆಂಗಳೂರು ಅನ್ತಾರೆ. ಅದಕ್ಕಿಂತ ಅಧಿಕ ಮಾಹಿತಿ ನೀಡಲು ಸ್ವತ: ಅವರೇ ವಿಫಲರಾಗಿದ್ದಾರೆ. ಆತ್ಮಹತ್ಯೆ ಯತ್ನ ನಡುವೆ ರಕ್ಷಿಸಲ್ಪಟ್ಟ ಗೊತ್ತು ಗುರಿಯಿಲ್ಲದ ಆ ಮಹಿಳೆಯಿನ್ನು ಸ್ನೇಹಮಂದಿರದ ಕುಟುಂಬಸ್ಥೆ.

ಇಂದು (18.6.2019) ಮಟಮಧ್ಯಾಹ್ನ ಮಂಗಳೂರಿನ ಪಣಂಬೂರು ಬೀಚ್ನಲ್ಲಿ ಸಮುದ್ರಕ್ಕೆ ಹಾರಿದ ಮಹಿಳೆಯನ್ನು ಕಂಡು ತಕ್ಷಣ ಕಾರ್ಯಪ್ರವೃತ್ತರಾದ ಲೈಫ್ ಗಾರ್ಡ್ ಸಿಬ್ಬಂದಿಗಳು ಅವರನ್ನು ಮೇಲಕ್ಕೆತ್ತಿ ರಕ್ಷಿಸುತ್ತಾರೆ. ವಿಷಯ ವಿಚಾರಿಸಿದಾಗ ಒಂದಕ್ಕೊಂದು ತಾಳೆಯಾಗದ ಮಾತು, "ನನ್ನನ್ನು ಸಾಯಲು ಬಿಡಿ" ಎಂದು ಚೀರಾಡುತ್ತಿದ್ದಳು. ಆಕೆಯನ್ನು ಹಾಗೆಯೇ ಬಿಡುವುದು ಸಮಂಜಸವಲ್ಲವೆಂದರಿತ ಸಿಬ್ಬಂದಿಗಳು ಪಣಂಬೂರು ಪೊಲೀಸು ಠಾಣೆಗೆ ಸೇರಿಸಿದ್ದರು. ಪೊಲೀಸರು ವಿಚಾರಣೆ ನಡೆಸಲಾಗಿ ಆಕೆಯೊರ್ವ ಮಾನಸಿಕ ಅಸ್ವಸ್ಥೆ ಎಂಬುವುದು ಖಾತರಿಯಾಯಿತು. ತನ್ನ ಹೆಸರು ವೆಂಕಟಮ್ಮ, ಊರು ಬೆಂಗಳೂರು ಎಂದಷ್ಟೇ ಹೇಳುತ್ತಿದ್ದರು. ವಿಳಾಸ, ಸಂಬಂಧಿಕರ ಮಾಹಿತಿ ವಿಚಾರಿಸಿದರೆ ಮೌನಿಯಾಗುತ್ತಿದ್ದರು. ಪೇಚಿಗೆ ಬಿದ್ದ ಪೊಲೀಸರು ಕೊನೆಗೆ ವಾರೀಸುದಾರರಿಲ್ಲದ ಆ ಮಹಿಳೆಯನ್ನು ಸ್ನೇಹಾಲಯದ ಸಂರಕ್ಷಣೆಗೆ ಬಿಡಲು ತೀರ್ಮಾನಿಸಿದರು. ಹಾಗೆ, ಮಹಿಳಾ ಪೊಲೀಸರು ಅವರನ್ನು ಮಂಜೇಶ್ವರದ ಸ್ನೇಹಮನೆಗೆ ತಲುಪಿಸಿದ್ದಾರೆ.

ಅವರಿಗೆ ಆಶ್ರಯ, ಆರೈಕೆ, ಶುಶ್ರೂಷೆ ನೀಡಿ ಸಹಜ ಸ್ಥಿತಿಗೆ ತಂದು ಮುಂದೆ ವಿಳಾಸ ಪತ್ತೆಹಚ್ಚಿ ಸುರಕ್ಷಿತವಾಗಿ ಊರಿಗೆ ಮರಳಿಸುವುದಾಗಿ ಸ್ನೇಹಾಲಯ ಮುಖ್ಯಸ್ಥ ಬ್ರದರ್ ಜೋಸೆಫ್ ಕ್ರಾಸ್ತಾ ತಿಳಿಸಿದ್ದಾರೆ.

 

 

Comments powered by CComment

Home | About | NewsSitemapTerms and Conditions / Refund Policy | Contact

Copyright ©2014 www.snehalayamangalore.com.
Powered by eCreators

Contact Us :

Snehalaya Charitable Trust (R)

Head Office :

Door No. 15 - 21 / 1307 / 2,
Mascarenhas Compound,
2nd Cross Lower Bendoor,
Near Colaco Hospital, Kankanady Post,
Mangalore - 575 002

Operational Office:

D.No.: IV - 239 / H,
Bachalike, Pavoor Post,
Manjeshwar,
Kasargod District,
Kerala - 671 323

 

 

Tel. Ph.: (Land & Fax)
04998 - 273322
Mob.: 09446547033, 9036451931
Email: [email protected]