ನಾಗರಿಕ ನೆಮ್ಮದಿಗೆ ಕಂಟಕವಾಗುತ್ತಿದ್ದಾತ ಇನ್ನು ಸ್ನೇಹದ ಮನೆಯ ಅಕ್ಕರೆಯಲ್ಲಿ......

ಕಳೆದ ಮೂರ್ನಾಲ್ಕು ದಿನಗಳಿಂದ ಕರ್ಕಶವಾಗಿ ಬೊಬ್ಬಿರಿಯುತ್ತಾ ಹುಟ್ಟುಡುಗೆಯಲ್ಲೇ ನಡೆಯುತ್ತಿದ್ದ ಸುಮಾರು 40 ವರ್ಷ ಹರೆಯದ ಯುವಕ ಮಂಗಳೂರು ವಾಮಂಜೂರು ಪ್ರದೇಶದಲ್ಲಿ ಅಸಹ್ಯ ಹುಟ್ಟಿಸುತ್ತಿದ್ದ ಜೊತೆಗೆ ಭಯದ ವಾತಾವರಣ ಸೃಷ್ಟಿಸುತ್ತಿದ್ದ. ಕಾನೂನು ಪಾಲಕರ ಕಣ್ಣಿಗೆ ಈತ ಬಿದ್ದಿದ್ದರೂ ಅವರು ಅಸಹಾಯಕರಾಗುತ್ತಿದ್ದರು. ಚಿಂತಿತರಾದ ನಾಗರಿಕರಲ್ಲಿ ಯಾರೋ ಮಂಜೇಶ್ವರದ ಸ್ನೇಹಾಲಯವನ್ನು ಸ್ಮರಿಸುತ್ತಾರೆ. ನಮ್ಮೊಂದಿಗೆ ನಿಕಟ ಸಂಪರ್ಕವಿರಿಸಿಕೊಂಡಿರುವ, ಮಂಗಳೂರು ಪ್ರದೇಶದಲ್ಲಿ ಸ್ನೇಹಾಲಯದ ಸೇವಾ ಕಾರ್ಯಕ್ಕೆ ಸಹಕರಿಸುತ್ತಿದ್ದ ಅಭಿಮಾನಿ ಪ್ರಕಾಶ್ ಪಿಂಟೋ ಅವರಿಗೆ ಈ ಬಗ್ಗೆ ದೂರವಾಣಿ ಕರೆ ಬಂದಿತು.

ಸುದ್ದಿಯರಿತಾಕ್ಷಣ ಸಂಗಡಿಗರೊಂದಿಗೆ ಸ್ಥಳಕ್ಕೆ ತೆರಳಿದ ಪಿಂಟೋ ಅವರು ವಾಮಂಜೂರು ಮಂಗಳಜ್ಯೋತಿ ಶಾಲೆ ಬಳಿಯಿಂದ ಆ ಬೆತ್ತಲೆ ಮನುಷ್ಯನನ್ನು ಹಿಡಿದು ದೇಹಕ್ಕೊಂದು ವಸ್ತ್ರ ಹಾಕಿ ವಾಹನದಲ್ಲಿ ನೇರ ಸ್ನೇಹಾಲಯಕ್ಕೆ ಕರೆ ತಂದಿದ್ದಾರೆ. ಆತ ಮಾನಸಿಕ ರೋಗಿಯಾಗಿದ್ದ; ಜತೆಗೆ ಕಂಠಪೂರ್ತಿ ಕುಡಿದಿದ್ದ. ಮದ್ಯದ ನಶೆ ಬಿಟ್ಟಾಗ ತನ್ನ ಹೆಸರು ಲೋಕೇಶ, ಊರು ಕನರ್ಾಟಕದ ಕೊಪ್ಪಳ ಅಂದಿದ್ದ. ಆದರೆ, ಬೇರೇನನ್ನೂ ಜ್ಞಾಪಿಸುವಷ್ಟರ ಮಟ್ಟಿಗೆ ಮತಿವಂತಿಕೆ ಆತನಿಗಿಲ್ಲ.

ಇದೀಗ ಸ್ನೇಹಾಲಯವು ಆತನನ್ನು ಸ್ವೀಕರಿಸಿದೆ. ಒಂದು ದಿನ ಪೂರ್ಣ ವಿಶ್ರಾಂತಿಗೆ ಬಿಡಲಾಗಿ, ಸದ್ಯ ಮಂಗಳೂರಿನ ಯೇನಪೋಯ ಆಸ್ಪತ್ರೆಯ ಮಾನಸಿಕ ರೋಗ ವಿಭಾಗಕ್ಕೆ ದಾಖಲಿಸಲಾಗಿದೆ. ವಾರದ ಚಿಕಿತ್ಸೆ ನಂತರ ಸ್ನೇಹಾಲಯದಲ್ಲಿ ಸಂರಕ್ಷಣೆ ಒದಗಿಸಲಾಗುವುದು.

 

 

Comments powered by CComment

Home | About | NewsSitemapTerms and Conditions / Refund Policy | Contact

Copyright ©2014 www.snehalayamangalore.com.
Powered by eCreators

Contact Us :

Snehalaya Charitable Trust (R)

Head Office :

Door No. 15 - 21 / 1307 / 2,
Mascarenhas Compound,
2nd Cross Lower Bendoor,
Near Colaco Hospital, Kankanady Post,
Mangalore - 575 002

Operational Office:

D.No.: IV - 239 / H,
Bachalike, Pavoor Post,
Manjeshwar,
Kasargod District,
Kerala - 671 323

 

 

Tel. Ph.: (Land & Fax)
04998 - 273322
Mob.: 09446547033, 9036451931
Email: [email protected]