We are glad to share our happiness with you all. Our brother Mr Sudeb reunites with his family at BIUR, Haiyat Nagar, Bankura, Indas, West Bengal.

He went missing from 8months. He brought Snehalaya on 23-3-2019 from Thumbenadu after the psychiatric treatment he was discharged and reunited with his family.

 

 

 

 

 

ಶಾಂತಚಿತ್ತನಾಗಿ ಮನೆ ಸೇರಿದ ಸುದೇಬ..... ಆ ಕುಟುಂಬದಲ್ಲಿ ಹಬ್ಬದ ಪ್ರತೀತಿ

ಚಿತ್ತ ಕ್ಷೊಭೆಗೊಳಗಾಗಿ ಏಳು ತಿಂಗಳುಗಳಿಂದ ನಿಗೂಢ ನಾಪತ್ತೆಯಾಗಿದ್ದ ಕುಮಾರನು ಸಂಪೂರ್ಣ ಮತಿವಂತನಾಗಿ ಮರಳಿದಾಗ ಆ ಅಮ್ಮನ ಆನಂದಕ್ಕೆ ಪಾರಮ್ಯವೇ ಇಲ್ಲ. "ಭಗವಂತಾ, ನನ್ನ ಮಗನ ಮರಳಿ ಕೊಟ್ಟೆಯಾ, ಇದಕ್ಕಿಂತ ದೊಡ್ಡ ಭಾಗ್ಯವೇನು" ಎಂದು ಆ ಹೆತ್ತೊಡಲು ಆನಂದಭಾಷ್ಪ ಸುರಿಸಿದಾಗ ಅಲ್ಲಿ ಸೇರಿದ್ದವರ ಕಣ್ಣುಗಳೂ ಮಂಜಾಯಿತು, ಮನ ತಣಿಯಿತು.

"ಎತ್ತಣ ಮಾಮರ ಎತ್ತಣ ಕೋಗಿಲೆ". ಪಶ್ಚಿಮ ಬಂಗಾಲ ಬಾಂಕುರ ಜಿಲ್ಲೆಯ ಇಂದಾಸ್ ಸಮೀಪದ ನಿವಾಸಿಯು ಗುರಿಯಿಲ್ಲದ ನಡಿಗೆಯ ಕೊನೆಗೆ ಉತ್ತರ ಕೇರಳದ ಮಂಜೇಶ್ವರ ತೂಮಿನಾಡು ಬಳಿಗೆ ತಲುಪುವುದೇ? ಮಂಜೇಶ್ವರ ಸ್ನೇಹಾಲಯದ ಕಣ್ಣಿಗೆ ಬೀಳುವುದೇ? ಕಲ್ಪನೆಗೂ ನೈಜತೆಗೂ ಸಂಬಂಧವಿಲ್ಲ. ಆದರೆ, ಮಾಮರಕ್ಕೂ ಕೋಗಿಲೆಗೂ ಇರುವ ಸಂಬಂಧದಂತೆ ಆತ ಬಂದು ಬಿದ್ದದ್ದು ಮಾತ್ರ ಸ್ನೇಹದ ಮನೆಯ ಬಾಗಿಲ ಬಳಿಯಲ್ಲಿ.

ಇಂದಾಸ್ ನಿವಾಸಿ ಸುದೇಬ್ ಎಂಬ 35 ರ ತರುಣ ಬಹಳ ಚಿಕ್ಕಂದಿನಿಂದಲೇ ಅಲ್ಪ ಮಾನಸಿಕ ವಿಭ್ರಾಂತಿ ಪ್ರದಶರ್ಿಸುತ್ತಿದ್ದನಂತೆ. ಆದರೆ, ಬಡ, ಅವಿದ್ಯಾವಂತ ಕುಟುಂಬ ಅವರದ್ದಾಗಿತ್ತು. ಸೂಕ್ತ ಶುಶ್ರೂಷೆ ಕೊಡಿಸಲು ಸಾಧ್ಯವಾಗಲಿಲ್ಲ. ಇದರಿಂದಾಗಿ ದೇಹ ಬೆಳೆಯುತ್ತಿದ್ದಂತೆ ಆತನ ರೋಗಾವಸ್ಥೆಯೂ ಬಲಗೊಂಡಿತ್ತು. ಏಳು ತಿಂಗಳ ಹಿಂದೊಮ್ಮೆ ಮನೆಯಿಂದ ಹೋದಾತ ಮುಂದೆ ಯಾರ ಕಣ್ಣಿಗೂ ಸಿಕ್ಕಿರಲಿಲ್ಲ.

ಇದೇ ಕಳೆದ ಮಾರ್ಚ್ 28. ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ತೂಮಿನಾಡು ಸಮೀಪ ಮಾನಸಿಕ ರೋಗಿಯೋರ್ವ ಕುಳಿತಿದ್ದ. ಅವರಿವರತ್ತ ಭಿಕ್ಷೆಗಾಗಿ ಕೈಚಾಚುತ್ತಿದ್ದಾತ ಹೊಟೇಲು ಮುಂದೆ ಆಹಾರಕ್ಕೆ ಬೇಡುತ್ತಿದ್ದ. ಕೆಲವೊಮ್ಮೆ ವಿಕಾರ ಶಬ್ದ ಹೊಮ್ಮಿಸುತ್ತಿದ್ದ. ಆತನ ಅವಸ್ಥೆ ಕಂಡ ನಾಗರಿಕರು ಸ್ನೇಹಾಲಯದ ಬ್ರದರ್ ಜೋಸೆಫ್ ಕ್ರಾಸ್ತಾರಿಗೆ ಫೋನಾಯಿಸುತ್ತಾರೆ. ಹಾಗೆ, ಸ್ನೇಹಾಲಯದ ಅತಿಥಿಯಾಗುತ್ತಾನೆ. ಚಿಕಿತ್ಸೆ, ಆಶ್ರಯ, ಆರೈಕೆ, ಆಹಾರ ಎಲ್ಲವೂ ಸೂಕ್ತ ರೀತಿಯಲ್ಲಿ ದೊರೆತಾಗ ಆ ಪ್ರೀತಿಯ ಪರಿಸರದಲ್ಲಿ ಆತ ಶೀಘ್ರವೇ ಗುಣಮುಖವಾಗುತ್ತಾನೆ. ಆತನೇ ಸುದೇಬ್. ಸರಿಯಾಗಿ ವಿಳಾಸ ನೆನಪಿರದಿದ್ದ ಸುದೇಬನನ್ನು ಈ ಕಳೆದ ಎಪ್ರಿಲ್ 10 ರಂದು ಮುಂಬಯಿಯಿ ಶ್ರದ್ಧಾ ಪುನಶ್ಚೇತನ ಕೇಂದ್ರಕ್ಕೆ ಬಿಡಲಾಯಿತು. ಶ್ರದ್ಧಾ ಕಾರ್ಯಕರ್ತರು ಈತನ ವಿಳಾಸ ಪತ್ತೆ ಹಚ್ಚಿದರು. ಹಾಗೆ, ಇಂದು (ಜೂನ್ 25 ರಂದು) ಸುದೇಬನನ್ನು ಸುರಕ್ಷಿತವಾಗಿ ಮನೆಗೆ ತಲುಪಿಸಿದ್ದಾರೆ.

ತನಗಿದು ಪುನರ್ಜನ್ಮ, ಬದುಕಿಸಿ ಈ ಹಂತಕ್ಕೇರಿಸಿದ ಸ್ನೇಹಾಲಯಕ್ಕೆ ಜೀವನ ಪೂರ್ತಿ ಆಭಾರಿಯಾಗಿರುವೆ ಎಂದು ಸುದೇಬ್ ಸ್ಮರಿಸಿದರು.

Comments powered by CComment

Home | About | NewsSitemapTerms and Conditions / Refund Policy | Contact

Copyright ©2014 www.snehalayamangalore.com.
Powered by eCreators

Contact Us :

Snehalaya Charitable Trust (R)

Head Office :

Door No. 15 - 21 / 1307 / 2,
Mascarenhas Compound,
2nd Cross Lower Bendoor,
Near Colaco Hospital, Kankanady Post,
Mangalore - 575 002

Operational Office:

D.No.: IV - 239 / H,
Bachalike, Pavoor Post,
Manjeshwar,
Kasargod District,
Kerala - 671 323

 

 

Tel. Ph.: (Land & Fax)
04998 - 273322
Mob.: 09446547033, 9036451931
Email: [email protected]