ಎರಡು ಸಂವತ್ಸರ......... ಉತ್ತರ ತುದಿಯಿಂದ ದಕ್ಷಿಣದತ್ತ ಅರ್ಥವಿಲ್ಲದೆ ವ್ಯರ್ಥವಾಗಿ ಸುತ್ತಾಡಿದ ಆ ಬಡಪಾಯಿಯು "ಸ್ನೇಹಾಲಯ"ದ ಕರ ಹಿಡಿದು ಮರಳಿ ಬದುಕಿಗೇರಿದ್ದಾರೆ. "ಮಡದಿ - ಮಕ್ಕಳ ತೊರೆದು ಇನ್ನೆಲ್ಲೂ ಹೋಗಲಾರೆ. ಸ್ನೇಹದ ಮನೆಗೆ ಕೃತಜ್ಞನಾಗಿರುವೆ. ಮುಂದೆ ಸಕುಟುಂಬಿಕನಾಗಿ ಆದರ್ಶಮಯಿ ಬದುಕು ಸಾಗಿಸುವೆ" ಅನ್ನೋವಾಗ ಆದರ್ಶರ ಕಣ್ಣಿನಿಂದ ನೀರಿಳಿಯುತ್ತಿತ್ತು.

ಉತ್ತರ ಪ್ರದೇಶ ರಾಜ್ಯದ ಜೂಸಿ ನಗರ ನಿವಾಸಿ 55 ವರ್ಷ ವಯಸ್ಸಿನ ಆದರ್ಶರದ್ದು ಕಡುಬಡ ಸಂಸಾರ. 45 ರ ಹರೆಯದಲ್ಲಷ್ಟೇ ವಿವಾಹಿತನಾಗಿರುವುದರಿಂದ ಇಬ್ಬರು ಮಕ್ಕಳಿನ್ನೂ ಕಿರಿಯ ಪ್ರಾಥಮಿಕ ವಿಭಾಗ ವಿದ್ಯಾರ್ಥಿಗಳು. ಪತ್ನಿ ಮನೆಯೊಡತಿ. ಮಡಲಿನಿಂದ ಹೊದಿಸಿದ ಕುರುಚಲು ಗುಡಿಸಲಿನಲ್ಲಿ ವಾಸ. ಆದರ್ಶರ ದುಡಿಮೆಯೇ ಕುಟುಂಬದ ಏಕಾಸರೆ. ಹೀಗಿರುವಾಗ, ಆರು ವರ್ಷಗಳ ಹಿಂದೆ ಅದೇನೋ ಖಿನ್ನತೆಯಿಂದ ಆದರ್ಶರು ಮನೋವ್ಯಾಧಿಗೆ ಒಳಗಾಗುತ್ತಾರೆ. ಪುಟ್ಟ ರೀತಿಯಲ್ಲಿ ಚಿಕಿತ್ಸೆ ಕೊಡಿಸಿದರೂ ರೋಗಾವಸ್ಥೆ ಉಲ್ಭಣವಾಗುತ್ತಿತ್ತು. ಮುಂದೆ ದುಡಿಮೆಗೆ ತೆರಳಲಾರದ ಸ್ಥಿತಿಯಲ್ಲಿ ಪತ್ನಿಯೇ ಕೆಲಸಕ್ಕಿಳಿದು ಉಪವಾಸ ಮರಣದಿಂದ ಕುಟುಂಬವನ್ನು ಪಾರು ಮಾಡಿದ್ದರು. ಆದ್ರೆ, ದುರಂತ ಅಲ್ಲಿಗೇ ಉಳಿಯಲಿಲ್ಲ. ವಿಭ್ರಾಂತಿಯು ತೀವ್ರ ರೂಪ ಪಡೆದಿತ್ತು.

ಎರಡು ವರ್ಷ ಹಿಂದೆ........... ಎಂದಿನಂತೆ ಮನೆಯಿಂದ ಗೊಣಗುತ್ತಾ ತೆರಳಿದ ಆದರ್ಶರು ಅಂದು ಮರಳಿರಲಿಲ್ಲ. ವಿವಿಧೆಡೆ ಹುಡುಕಾಡಿಯೂ ಫಲ ಕಾಣಲಿಲ್ಲ........

ಇತ್ತ, ಕೇರಳದ ಕಾಸರಗೋಡು ಜಿಲ್ಲೆ ಕುಂಬಳೆ ಸಮೀಪ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಗೊಣಗಾಡುತ್ತಾ ಕೂತಿದ್ದ ಮನೋರೋಗಿಯನ್ನು ಕಂಡ ಸ್ಥಳೀಯ ನಾಗರಿಕರು ಸ್ನೇಹಾಲಯಕ್ಕೆ ಮಾಹಿತಿ ನೀಡುತ್ತಾರೆ. ಆತ ಚಿಂದಿ ಬಟ್ಟೆಯಲ್ಲಿದ್ದ, ದೇಹ ಜಿಡ್ಡುಗಟ್ಟಿತ್ತು. ಕೂದಲು, ಗಡ್ಡ ಕೊಳಕಾಗಿ ಶರೀರಕ್ಕೆ ಮುತ್ತಿಕೊಂಡಿತ್ತು. ನಾಗರಿಕರ ಮಾಹಿತಿಯಂತೆ ಇದೇ ಕಳೆದ ಮಾರ್ಚ್ 13 ರಂದು ಸ್ನೇಹಾಲಯ ತಂಡವು ತೆರಳಿ ಆ ವ್ಯಕ್ತಿಯನ್ನು ಕರೆ ತಂದಿದ್ದಾರೆ. ಚಿಕಿತ್ಸೆ, ಆಪ್ತ ಸಮಾಲೋಚನೆ, ಆರೈಕೆ, ಕೂಡಿ ಬಾಳುವಿಕೆಯ ಫಲವಾಗಿ ಆ ವ್ಯಕ್ತಿ ಶೀಘ್ರ ಚೇತರಿಸಿದ್ದರು.

ತನ್ನ ಹೆಸರು ಆದರ್ಶ್ ಎಂದೂ ಉತ್ತರ ಪ್ರದೇಶದ ಎಲ್ಲೋ ಮನೆಯಿರುವುದಾಗಿಯೂ ಸ್ಮರಿಸಿದ್ದರು. ಹಾಗೆ, ಇದೇ ಎಪ್ರಿಲ್ 10 ರಂದು ಆದರ್ಶರನ್ನು ಸ್ನೇಹಾಲಯದಿಂದ ಮುಂಬಯಿಯ ಶ್ರದ್ಧಾ ಪುನರ್ವಸತಿ ಕೇಂದ್ರಕ್ಕೆ ಕಳುಹಿಸಲಾಯಿತು. ಈ ರೀತಿಯವರ ಖಚಿತ ವಿಳಾಸ ಪತ್ತೆ ಹಚ್ಚಿ ಹುಟ್ಟೂರು ಸೇರಿಸಲು ಶ್ರದ್ಧಾದಲ್ಲಿ ವಿಶೇಷ ಕಾರ್ಯ ತಂಡವೇ ಇದೆ. ಹಾಗೆ, ಆದರ್ಶರ ಮನೆ ಗುರುತಿಸಲಾಗಿ ಇಂದು ಗುರುವಾರ ಅವರನ್ನು ಸುರಕ್ಷಿತವಾಗಿ ಕುಟುಂಬಿಕರಿಗೆ ಹಸ್ತಾಂತರಿಸಲಾಯಿತು. ಪುನರಾಗಮನದ ಸಂತೋಷ ಇಡೀ ಗ್ರಾಮದ ಉತ್ಸವವಾಯಿತು.

 

 

 

Add comment


Security code
Refresh

Home | About | NewsSitemapTerms and Conditions / Refund Policy | Contact

Copyright ©2014 www.snehalayamangalore.com.
Powered by eCreators

Contact Us :

Snehalaya Charitable Trust (R)

Head Office :

Door No. 15 - 21 / 1307 / 2,
Mascarenhas Compound,
2nd Cross Lower Bendoor,
Near Colaco Hospital, Kankanady Post,
Mangalore - 575 002

Operational Office:

D.No.: IV - 239 / H,
Bachalike, Pavoor Post,
Manjeshwar,
Kasargod District,
Kerala - 671 323

 

 

Tel. Ph.: (Land & Fax)
04998 - 273322
Mob.: 09446547033, 9036451931
Email: [email protected]