Snehalaya is glad to share our happiness with you all. Yesterday 17-7-2019 Mr Bikram Mandal reunited with his family.

Mr Bikram Mandal aged 28yrs was wondering in Marnanikatte, mangalore brought him Snehalaya. On 25 June 2019 got a call from Mr Zulfi(Munna social worker ),Mangalore about a man wondering on the street. When our team reached the place, we found him in mentally disturbed and half naked.

We welcomed to Snehalaya and treated him for his psychiatric illness at Hospital. Mr Vikram Mandal soon began to regain mental health.

During the counselling session he said his address and sent letter to his family. His brother in-law Mr Vinod Mandal visited Snehalaya from Malda dist, West Bengal. It was an emotional reunion.

Mr Vikram married and father of two daughters, 2nd daughter is just 5 months old. Bikram came to Thiruvananthpuram for labour work. While returning to home he lost his way. According to his brother in-law since 3months he went missing from them. We wish him bright future.

We thank God for the special blessings and grateful to all our well-wishers and friends for your support and prayers.

God bless you all

 

 

 

 

 

 


 

ಬಂಗಾಲದ ಮಂಡಾಲ ಸ್ನೇಹದ ಆರೈಕೆಯಿಂದ ಮರಳಿ ಬದುಕಿಗೆ............

ಎತ್ತಣ ಮಾಮರ ಎತ್ತಣ ಕೋಗಿಲೆ ಎತ್ತಣಿಂದೆತ್ತ ಸಂಬಂಧ?......... ಹೌದು! ಎಲ್ಲಿನ ಬಂಗಾಲ, ಎಲ್ಲಿನ ತಿರುವನಂತಪುರ, ಎಲ್ಲಿನ ಮಂಗಳೂರು ಮಾರ್ನಮಿಕಟ್ಟೆ............... ಪಶ್ಚಿಮ ಬಂಗಾಲದಿಂದ ದಕ್ಷಿಣ ಕೇರಳದ ತಿರುವನಂತಪುರಕ್ಕೆ ಕೆಲಸವರಸಿ ಬಂದ ಯುವಕ ಮನೋವ್ಯಥೆಗೊಳಗಾಗಿ ತನಗರಿವಿಲ್ಲದೆಯೇ ಬಂದು ಬಿದ್ದದ್ದು ಮಾತ್ರ ಮಂಗಳೂರಿನಲ್ಲಿ. ಹೀಗೆ ಮಾನಸಿಕ ಸ್ಥಿಮಿತ ಕಳೆದು ಎಲ್ಲೋ ಬಿದ್ದು ಕಮರಿ ಹೋಗುವ ಬಡ ಜೀವಗಳೆಷ್ಟು? ಆದರೆ, ತನಗೆ ಸಂಬಂಧವಿಲ್ಲದ ಮಂಗಳೂರಿಗೆ ತಲುಪಿದ್ದರಿಂದಲೇ ಆತ ಸ್ನೇಹದ ಬೀಡಿನ ಆಶ್ರಯ, ಆರೈಕೆ ಹೊಂದುವಂತಾದ. ಇದರಿಂದಾಗಿಯೇ ಪೂರ್ಣ ಗುಣಮುಖನಾಗಿ ಸಂಬಂಧಿಕರನ್ನು ಮರಳಿ ಗಳಿಸಿ ಸುಂದರ ಬದುಕು ರೂಪಿಸುವಂತಾದ.........

ಆತ ವಿಕ್ರಮ್ ಮಂಡಾಲ. 28 ರ ಹರೆಯ. ವಿವಾಹಿತನಾಗಿ ಮೂರು ವರ್ಷ ಹಾಗೂ ಎರಡು ತಿಂಗಳ ಪುಟಾಣಿಯರ ಅಪ್ಪ. ತಂದೆ, ತಾಯಿ ಒಳಗೊಂಡ ಮಧ್ಯಮ ವರ್ಗದ ಕುಟುಂಬ ನಡೆಸುವ ಹೊಣೆಗಾರಿಕೆ ಆ ಯುವಕನ ಮೇಲೆ. ಮೇಸ್ತ್ರಿ ಕೆಲಸ ಮಾಡುತ್ತಿದ್ದ, ಮೈಮುರಿದು ದುಡಿಯುತ್ತಿದ್ದ. ನಿರ್ಮಾಣ ಕೆಲಸಕ್ಕೆ ಕೇರಳದಲ್ಲಿ ಉತ್ತಮ ವೇತನ ದೊರಕುತ್ತಿರುವುದಾಗಿ ಅರಿತು ಆರು ತಿಂಗಳ ಹಿಂದೆ ಸಂಗಡಿಗರ ಜೊತೆಗೆ ಕೇರಳದ ತಿರುವನಂತಪುರಕ್ಕೆ ಬಂದಿದ್ದ. ಪುಟಾಣಿಯರನ್ನು ಬಿಟ್ಟು ಒಲ್ಲದ ಮನಸ್ಸಿನಿಂದಲೇ ಬಂದಾತನಿಗೆ ಕುಟುಂಬದ ನೆನಪು ಬಲವಾಗಿ ಕಾಡುತ್ತಿತ್ತು. ಹೀಗಿರಲೊಂದು ದಿನ ತಿರುವನಂತಪುರದಿಂದ ದಿಢೀರ್ ನಾಪತ್ತೆಯಾಗಿದ್ದ. ಸಹ ಕಾಮರ್ಿಕರು ಹುಡುಕಾಡಿಯೂ ಫಲಕಾರಿಯಾಗಿರಲಿಲ್ಲ. ಊರಿಗೆ ಸಂದೇಶ ರವಾನಿಸಿದ್ದರು. ಆದರೆ, ಆತ ಹುಟ್ಟೂರಿಗೂ ತಲುಪಿರಲಿಲ್ಲ........

ಇತ್ತ..... ಮಂಗಳೂರು ನಗರದ ಮಾರ್ನಮಿಕಟ್ಟೆಯಲ್ಲಿ ಕೊಳಕು ಬಟ್ಟೆ ಧರಿಸಿ ಯುವಕನೋರ್ವ ಅಂಗಡಿ ವರಾಂಡದಲ್ಲಿ ಕುಳಿತು ಗೊಣಗಾಡುತ್ತಿದ್ದ. ಮಂಗಳೂರಿನ ಸಮಾಜ ಸೇವಕ, ಮಾನವ ಸ್ನೇಹಿಯಾಗಿರುವ ಝುಲ್ಫಿ (ಮುನ್ನಾ) ಅವರ ಕಣ್ಣಿಗೆ ಈ ದೀನ ಯುವಕ ಬೀಳುತ್ತಾನೆ. ತಡಮಾಡಲಿಲ್ಲ. ಸ್ನೇಹಾಲಯಕ್ಕೆ ಕರೆ ಮಾಡಿದ ಅವರು ಯುವಕನ ದೈನ್ಯ ಬಗ್ಗೆ ಬ್ರದರ್ ಜೋಸೆಫ್ ಕ್ರಾಸ್ತಾ ಅವರಿಗೆ ಮಾಹಿತಿಯಿತ್ತು ಸಂರಕ್ಷಣೆಯೊದಗಿಲು ಮನವಿ ಮಾಡುತ್ತಾರೆ. ಇದೇ ಕಳೆದ ಜೂನ್ 25 ರಂದು ಸ್ನೇಹಾಲಯ ರೂವಾರಿ ಜೋಸೆಫ್ ಕ್ರಾಸ್ತಾರು ಅತ್ತ ತೆರಳುತ್ತಾರೆ. ಆತನ ಸ್ಥಿತಿಯಿಂದ ಮರುಕಗೊಂಡು ತಕ್ಷಣವೇ ಕರೆ ತರುತ್ತಾರೆ. ಆತನನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಿ ತಜ್ಞ ಚಿಕಿತ್ಸೆಗೆ ಒಳಪಡಿಸುತ್ತಾರೆ. ಬಳಿಕ ಸ್ನೇಹ ಮನೆಯಲ್ಲಿ ಸೂಕ್ತ ಉಪಚಾರ, ಆಪ್ತ ಸಮಾಲೋಚನೆ ನೀಡಲಾಯಿತು. ದಿನಗಳ ಹಿಂದೆ ಮನೋಸ್ಥಿತಿ ಮರಳಿ ಗಳಿಸಿದಾತ ನಡೆದದ್ದೆಲ್ಲವನ್ನೂ ಸ್ಮರಿಸಿದ್ದ. ಹಾಗೆ, ಸ್ನೇಹಾಲಯವು ಹುಟ್ಟೂರಿಗೆ ಮಾಹಿತಿ ನೀಡಿದೆ. ಕಳೆದ ದಿನ ಆತನ ಭಾವ ಸಹಿತ ಸಂಬಂಧಿಕರು ತಲುಪಿ ಬದುಕಿಸಿದ ಸ್ನೇಹಾಲಯಕ್ಕೆ ಸಹಸ್ರ ಕೃತಜ್ಞತೆಯನ್ನು ಅರ್ಪಿಸಿ ವಿಕ್ರಂ ಮಂಡಾಲನನ್ನು ಊರಿಗೆ ಕರೆದುಕೊಂಡು ಹೋಗಿದ್ದಾರೆ. ಹಾಗೆ, ಸ್ನೇಹಮನೆಯ ಪುನಶ್ಚೇತನ ಚಟುವಟಿಕೆಯಲ್ಲಿ ಇದು ಮತ್ತೊಂದು ಗರಿಯಾಯಿತು

Add comment


Security code
Refresh

Home | About | NewsSitemapTerms and Conditions / Refund Policy | Contact

Copyright ©2014 www.snehalayamangalore.com.
Powered by eCreators

Contact Us :

Snehalaya Charitable Trust (R)

Head Office :

Door No. 15 - 21 / 1307 / 2,
Mascarenhas Compound,
2nd Cross Lower Bendoor,
Near Colaco Hospital, Kankanady Post,
Mangalore - 575 002

Operational Office:

D.No.: IV - 239 / H,
Bachalike, Pavoor Post,
Manjeshwar,
Kasargod District,
Kerala - 671 323

 

 

Tel. Ph.: (Land & Fax)
04998 - 273322
Mob.: 09446547033, 9036451931
Email: [email protected]