Mr Raman aged 34yrs from Tamil Nadu has been reunite with his family after 5months.

Mr Raman was found on 3rd February 2019 from Kedambadi, Manjeshwara. He was brought by Snehalaya team after the physical care he was admitted to hospital for psychiatric treatment.

Raman has completed diploma in computer science and he didn't get a good job for that he was depressed.

His parents welcomed him and it was an emotional reunion.

 

 

 

 


ಸ್ನೇಹದ ಆರೈಕೆಯಲ್ಲಿ ರಾಮನ್ಗೆ ನವಬಾಳು

ಬಣ್ಣದ ಬದುಕು ಹೊತ್ತು ನಡೆಯುತ್ತಿದ್ದ ಆ ಯುವಕನಿಗೆ ದಿಢೀರ್ ಏನಾಯಿತೋ ಗೊತ್ತಿಲ್ಲ. ಎಲ್ಲರ ಜೊತೆ ಬೆರೆಯುತ್ತಿದ್ದ, ಸರ್ವರಿಗೂ ಬೇಕಾಗಿದ್ದ ಯುವಕನ ದಿಢೀರ್ ಬದಲಾವಣೆಯು ಆತನ ಕುಟುಂಬ ಮಾತ್ರವಲ್ಲ, ನೆಂಟರಿಷ್ಟರನ್ನು ಕೂಡಾ ದು:ಖದಲ್ಲಿ ತೊಯ್ದಾಡಿಸಿತ್ತು. ಯಾರಲ್ಲೂ ಮಾತಾಡದೆ ತನ್ನಷ್ಟಕ್ಕೆ ಗೊಣಗುತ್ತಿದ್ದ ಆತನನ್ನು ಹೆತ್ತವರು ಸಾಕಷ್ಟು ಚಿಕಿತ್ಸೆಗೆ ಒಳಪಡಿಸಿದರೂ ಅವನ ಸ್ಥಿತಿ ಸುಧಾರಿಸಲಿಲ್ಲ. ನಿದ್ದೆಯೇ ಇಲ್ಲದೆ ಚಡಪಡಿಸುತ್ತಿದ್ದ ಆತನಿಗಾಗಿ ಹೆತ್ತವರು ಕೂಡಾ ನಿದ್ದೆ ಬಿಟ್ಟು ಕಾವಲು ಕೂರುತ್ತಿದ್ದರು. ಆದರೆ...... ಆತನಿಗೆ ಅಷ್ಟರಲ್ಲೇ ಪೂರ್ಣ ಮತಿವಿಕಲತೆ ಬಾಧಿಸಿತ್ತು.

ಹೀಗಿರಲೊಂದು ದಿನ ಹೆತ್ತವರ ಗಮನ ಅಲ್ಪ ತಪ್ಪಿದಾಗ ಮನೆಯಿಂದ ಆತ ಹೊರಗಿಳಿದಿದ್ದ. ಅಮ್ಮನ ಆಕ್ರಂದನ, ಅಪ್ಪನ ನೋವು ಮುಗಿಲು ಮುಟ್ಟಿತ್ತು. ಪೊಲೀಸು ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಯಿತು. ತಿಂಗಳುಗಳು ಉರುಳಿದುವು. ಅವನ ಬಗ್ಗೆ ಸುಳಿವು ಕೂಡಾ ದೊರೆಯಲಿಲ್ಲ. ಹೆತ್ತೊಡಲು ಮಗನಿಗಾಗಿ ಅತ್ತು, ಅತ್ತು ಮೂಲೆ ಸೇರುವಂತಾಯಿತು. ಆ ತಂದೆಯು ಮಗನನ್ನು ಕಳೆದುಕೊಂಡ ವಾಸ್ತವತೆಗೆ ಬರುವುದು ಅನಿವಾರ್ಯವಾಯಿತು.......

ಇತ್ತ, ಮಂಜೇಶ್ವರದ ಕೆದುಂಬಾಡಿ ಸನಿಹ ರಸ್ತೆ ಬದಿಯಲ್ಲಿ ಸಾರ್ವಜನಿಕರ ನೆಮ್ಮದಿಗೆ ಕಂಟಕವಾಗಿ ಒಬ್ಬಾತ ಅಲೆದಾಡುತ್ತಿದ್ದ. ಮಾನವ ಹೃದಯಿಗಳು ತಕ್ಷಣವೇ ಸ್ನೇಹಾಲಯದ ಗಮನಕ್ಕೆ ತಂದಿರುವುದು ಆತನ ಬದುಕಿನಲ್ಲಿ ಮತ್ತೊಂದು ತಿರುವಿಗೆ ನಾಂದಿಯಾಯಿತು. ಇದೇ ಕಳೆದ ಫೆಬ್ರವರಿ ಮೂರು. ಬ್ರದರ್ ಜೋಸೆಫ್ ಕ್ರಾಸ್ತಾ ನೇತೃತ್ವದ ತಂಡವು ತೆರಳಿ ಆತನನ್ನು ಸ್ನೇಹಮನೆಗೆ ಕರೆತಂದಿದೆ. ಅಲ್ಲಿನ ಆರೈಕೆಯಲ್ಲಿ ಆತ ಅನಿರೀಕ್ಷಿತ ಚೇತರಿಕೆ ಕಂಡಿದ್ದ. ನಡೆದದ್ದೆಲ್ಲವನ್ನೂ ಸ್ಮರಿಸಿದ್ದಾನೆ. ಅವನ ಹೆಸರು ರಾಮನ್, 32 ವರ್ಷ ಹರೆಯ. ಅವಿವಾಹಿತ. ಕಂಪ್ಯೂಟರ್ ಡಿಪ್ಲೋಮಾ ಪೂರ್ಣಗೊಳಿಸಿ ಕುಟುಂಬದ ನಿರೀಕ್ಷೆಯಾಗಿದ್ದ. ಯಾಕೋ, ಹೇಗೋ ಮಾನಸಿಕ ಖಿನ್ನತೆ ಬಾಧಿಸಿ ಬೀಡು ಬಿಟ್ಟಿದ್ದ. ಹಾಗಿದ್ದೂ ಪೂರ್ಣ ವಿಳಾಸ ನೆನಪಿಸಲು ಆತನಿಗೆ ಸಾಧ್ಯವಾಗಿಲ್ಲ. ಇದರಿಂದಾಗೇ ಈ ಕಳೆದ ಎಪ್ರಿಲ್ 10 ರಂದು ರಾಮನ್ನನ್ನು ಸ್ನೇಹಾಲಯದಿಂದ ಮುಂಬಯಿಯ ಶ್ರದ್ಧಾ ಪುನಶ್ಚೇತನ ಕೇಂದ್ರಕ್ಕೆ ಸಾಗಿಸಲಾಯಿತು. ಅಲ್ಲಿನ ಸ್ವಯಂಸೇವಕರ ತಂಡವು ಆತನ ವಿಳಾಸ ಗುರುತಿಸಿ ಜುಲೈ 11ರಂದು ರಾಮನ್ನನ್ನು ಸುರಕ್ಷಿತವಾಗಿ ತಮಿಳ್ನಾಡಿನ ಕೆ.ಕೆ. ನಗರ ಕುನರ್ುಪ್ಪಾಡಿಯಲ್ಲಿರುವ ಮನೆಗೆ ಸೇರಿಸಿದ್ದಾರೆ. ಮನೆಗೆ ತಲುಪಿದ ರಾಮನ್ ಸ್ನೇಹಾಲಯವನ್ನು ಸಂಪಕರ್ಿಸಿದ್ದಾನೆ. ಮರುಬಾಳು ಕರುಣಿಸಿದ ಈ ಮಂದಿರಕ್ಕೆ ಹೃದಯ ತುಂಬಿ ಕೃತಜ್ಞತೆಯನ್ನು ಅರ್ಪಿಸಿದ್ದಾನೆ.........

Add comment


Security code
Refresh

Home | About | NewsSitemapTerms and Conditions / Refund Policy | Contact

Copyright ©2014 www.snehalayamangalore.com.
Powered by eCreators

Contact Us :

Snehalaya Charitable Trust (R)

Head Office :

Door No. 15 - 21 / 1307 / 2,
Mascarenhas Compound,
2nd Cross Lower Bendoor,
Near Colaco Hospital, Kankanady Post,
Mangalore - 575 002

Operational Office:

D.No.: IV - 239 / H,
Bachalike, Pavoor Post,
Manjeshwar,
Kasargod District,
Kerala - 671 323

 

 

Tel. Ph.: (Land & Fax)
04998 - 273322
Mob.: 09446547033, 9036451931
Email: [email protected]