It is when another golden feather reaches it's family, wife and children by the help of Snehalaya. Balu is the person aged 58 who departed from his family, now living a happy life with them...

He was a person from a settled family from Poona. Who had a well established business. He had a beautiful and a satisfied family with 2 sons. It was something like one kind of divine like another....... Day by day something made Balu very stressful. He was mentally upset. Even after giving a lot of treatment his illness became more. Many a times if he went leaving the house he was not returning. He used to stay either in friends or relatives house.

 

 

 

It is about a year ago he went from his house as usual.. His wife thought that he might have went to relatives house and will return soon. But when he didn't return even after 2days they started searching him everywhere they complained with the police but there was no clue about him.

This Feburary 2019 a person with long hair and beard left was roaming at Thalapadi. The surrounding people were very much torucherd by that person. He was shouting badly and was attacking the people. His mental state was out of control. Sometimes he was eating from the waste box that kept in the hotel and was sleeping in the bus stand. Brother Joseph Crasta the founder of Snehalaya got the news on February 21. He left along with his volentiers to the place. He was found with long hair and dirt on his body and was stinking badly. They brought him cleaned his body done his haircut and hoe him food and allowed him to take rest. After 2 days he became clam and was admitted to the Yenapoya hospital Mangaluru... After giving 20 days of treatment his mental state came to control. Then living at Snehalaya doing everyday activities living together he was Abel to come over his illness and became proper. He realized he was from Maharashtra...

When he became completely alright he was sent to Center for Mental Retardation Disorders Mumbai. From there the volentiers searched about Balus address and sent him to his Poona's house. The volentiers said that His wife and children were in Seventh Heaven When they saw him....


 

ಬಾಲು ಬಾಳಿಗೆ ಸ್ನೇಹಗಂಗೆ ಹರಿದಾಗ........

ಸ್ನೇಹಾಲಯದ ಪುನಶ್ಚೇತನ, ಪುನರ್ವಸತಿ ಸತ್ರದ ತುರಾಯಿಯಲ್ಲಿ ಮತ್ತೊಂದು ಚಿನ್ನದ ಗರಿ. ಮಡದಿ, ಮಕ್ಕಳಿಂದ ದೂರವಾಗಿ ಬೀದಿಯಲ್ಲಿ ಕಮರುತ್ತಿದ್ದ ಮಹಾರಾಷ್ಟ್ರ ನಿವಾಸಿ ಬಾಲು (58) ಈಗ ಸುಖೀ ಜೀವನ ಮುಂದುವರಿಸುವಂತಾಗಿದ್ದಾರೆ.....

ಪೂನಾ ನಗರ ಸಮೀಪದ ನಿವಾಸಿ ಬಾಲು ಅವರದ್ದು ಸ್ಥಿತಿವಂತ ಕುಟುಂಬ. ವ್ಯಾಪಾರ - ವಹಿವಾಟು ನಡೆಸುತ್ತಿದ್ದರು, ಸಾಕಷ್ಟು ಆಸ್ತಿಯೂ ಇದೆ. ಪತ್ನಿ, ಇಬ್ಬರು ಗಂಡು ಮಕ್ಕಳನ್ನೊಳಗೊಂಡ ಸಂತೃಪ್ತ ಸಂಸಾರ. ಆದರೆ........... ತಾನೊಂದು ಬಗೆದರೆ ದೈವ ಇನ್ನೊಂದು ಬಗೆಯುತ್ತದಂತೆ. ಅದೇನೋ ಖಿನ್ನತೆಗೊಳಗಾದ ಬಾಲು ದಿನೇದಿನೇ ಮಾನಸಿಕವಾಗಿ ಹದಗೆಡತೊಡಗಿದ್ದರು. ಸಾಕಷ್ಟು ಚಿಕಿತ್ಸೆ ಕೊಡಿಸಿದರೂ ರೋಗಾವಸ್ಥೆ ಉಲ್ಭಣಾವಸ್ಥೆಗೆ ಏರುತ್ತಲೇ ಇತ್ತು. ಕೆಲವೊಮ್ಮೆ ಮನೆ ಬಿಟ್ಟು ಹೊರಟರೆ ದಿನಗಳ ಕಾಲ ಬರುತ್ತಿರಲಿಲ್ಲ. ಸಂಬಂಧಿಕರ, ಮಿತ್ರರ ಮನೆಗಳಲ್ಲಿ ತಂಗುತ್ತಿದ್ದರು.

ಒಂದು ವರ್ಷ ಹಿಂದೆ..... ಎಂದಿನಂತೆ ಮನೆಯಿಂದ ಹೊರಟಿದ್ದರು. ಕುಟುಂಬಿಕರ ಮನೆಗೆ ತೆರಳಿರಬೇಕು, ಮರಳುವರೆಂದು ಮಡದಿ ನಂಬಿದ್ದರು. ಆದರೆ, ಎರಡು ದಿನ ದಾಟಿಯೂ ಮಾಹಿತಿಯಿಲ್ಲ. ಎಲ್ಲೆಡೆ ವಿಚಾರಿಸಿದರು, ಪೊಲೀಸ್ಗೆ ದೂರು ಸಲ್ಲಿಸಲಾಯಿತು. ವ್ಯಾಪಕ ಹುಡುಕಾಟ ನಡೆಸಿದರೂ ಫಲ ಶೂನ್ಯ.......

ಇದೇ 2019 ರ ಫೆಬ್ರವರಿ ತಿಂಗಳು. ಜಡೆ ಕೂದಲು, ಹುಲುಸು ಗಡ್ಡ ಇಳಿಯಬಿಟ್ಟು ತಲಪ್ಪಾಡಿ ಪ್ರದೇಶದಲ್ಲಿ ತಿರುಗಾಡುತ್ತಿದ್ದ ಹುಚ್ಚನ ಉಪಟಳದಿಂದ ನಾಗರಿಕ ಮಂದಿ ತೀರಾ ಕಂಗೆಟ್ಟಿದ್ದರು. ಆತ ಕರ್ಣತಮ್ಮಟೆ ಹರಿಯುವಂತೆ ಕಿರುಚುತ್ತಿದ್ದ, ಜನರನ್ನು ಆಕ್ರಮಿಸುತ್ತಿದ್ದ. ಹೊಟೇಲಿನ ವೇಸ್ಟ್ ಡಬ್ಬಾಕ್ಕೆ ಕೈಹಾಕಿ ಅದನ್ನೇ ಮೆಲ್ಲುತ್ತಿದ್ದ. ಬಸ್ಸು ತಂಗುದಾಣದಲ್ಲಿ ಒರಗುತ್ತಿದ್ದ. ಹುಚ್ಚನ ಅವಾಂತರದ ಸುದ್ದಿಯರಿತ ಸ್ನೇಹಾಲಯದ ರೂವಾರಿ ಜೋಸೆಫ್ ಕ್ರಾಸ್ತಾ ಅವರು ಫೆಬ್ರವರಿ 21 ರಂದು ಸಿಬ್ಬಂದಿಗಳ ಜೊತೆ ತೆರಳುತ್ತಾರೆ. ಕೆಸರು ಮೆತ್ತಿಸಿಕೊಂಡು, ಚರ್ಮ ಜಾರಿದ ಸ್ಥಿತಿಯಲ್ಲಿ ವಾಸನೆ ಬೀರುತ್ತಾ ಬಸ್ಸು ತಂಗುದಾಣದಲ್ಲಿ ಮಲಗಿದ್ದಾತನನ್ನು ಕರೆತಂದರು. ಕೂದಲು ಕತ್ತರಿಸಿ, ಸ್ನಾನ ಮಾಡಿಸಿ, ಆಹಾರವನ್ನಿತ್ತು ವಿಶ್ರಾಂತಿಗೆ ಬಿಟ್ಟರು. ಎರಡು ದಿನಗಳಲ್ಲಿ ಅಲ್ಪ ಶಾಂತಚಿತ್ತನಾದಾಗ ಮಂಗಳೂರು ಯೇನಪೋಯ ಆಸ್ಪತ್ರೆಯಲ್ಲಿ ದಾಖಲಿಸಲಾಯಿತು. 20 ದಿನಗಳ ದಾಖಲು ಚಿಕಿತ್ಸೆಯಲ್ಲಿ ಮತಿವಂತಿಕೆಯತ್ತ ಬಂದಿದ್ದ. ಮುಂದೆ, ಸ್ನೇಹಾಲಯದಲ್ಲಿ ನಿತ್ಯ ಚಟುವಟಿಕೆ, ಕೂಡಿ ಬಾಳುವಿಕೆ.... ತಿಂಗಳುಗಳಲ್ಲೇ ಸಹಜತೆ ಕಂಡುಕೊಂಡರು.... ತನ್ನ ಊರು ಮಹಾರಾಷ್ಟ್ರ ಎಂದು ನೆನಪಿಸಿದ್ದರು.

ಪೂರ್ಣ ಗುಣಮುಖನಾದ ವ್ಯಕ್ತಿಯನ್ನು ಮುಂಬಯಿಯಿ ಶ್ರದ್ಧಾ ಮಾನಸಿಕ ಅಸ್ವಸ್ಥರ ಪುನಶ್ಚೇತನ ಕೇಂದ್ರಕ್ಕೆ ಬಿಡಲಾಯಿತು. ಅಲ್ಲಿಂದ ಬಾಲು ಅವರ ವಿಳಾಸ ಪತ್ತೆ ಹಚ್ಚಿದ ಶ್ರದ್ಧಾ ಕಾರ್ಯಕರ್ತರು ಕಳೆದ ವಾರ ಬಾಲು ಅವರನ್ನು ಪೂನಾದ ಮನೆಗೆ ಬಿಟ್ಟು ಬಂದಿದ್ದರು. ಆ ಸಂದರ್ಭದಲ್ಲಿ ಅವರ ಪತ್ನಿ, ಮಕ್ಕಳ ಸಂತೋಷಕ್ಕೆ ಪಾರಮ್ಯವೇ ಇರಲಿಲ್ಲವೆಂದು ಶ್ರದ್ಧಾ ಕಾರ್ಯಕರ್ತರು ಹೇಳುತ್ತಾರೆ.

 

 

Comments powered by CComment

Home | About | NewsSitemapTerms and Conditions / Refund Policy | Contact

Copyright ©2014 www.snehalayamangalore.com.
Powered by eCreators

Contact Us :

Snehalaya Charitable Trust (R)

Head Office :

Door No. 15 - 21 / 1307 / 2,
Mascarenhas Compound,
2nd Cross Lower Bendoor,
Near Colaco Hospital, Kankanady Post,
Mangalore - 575 002

Operational Office:

D.No.: IV - 239 / H,
Bachalike, Pavoor Post,
Manjeshwar,
Kasargod District,
Kerala - 671 323

 

 

Tel. Ph.: (Land & Fax)
04998 - 273322
Mob.: 09446547033, 9036451931
Email: [email protected]