A man who had been suffering from mental illness for 15 years and the mysterious disappearance of two years is now dear to all.

Many of the close relatives did not even think it would be a reincarnation. Now he is working .... Living..... Enjoying life. He is not worried about the years gone by. He wanted to be like everyone else, mingle with everyoneHe is very kind towards Snehalaya and Shraddha team who gave a new life to him.

He is J. Babu, 58 years old was living with his parents at Pondicherry MGR Street, Tamil Nadu with his small family. Both parents fall ill and died. The loneliness of Babu's life began to haunt him.

He started to live with his Aunty’s house. Still, he felt inferior about himself. Mental health began to escalate. He reduced to speak and began to sit into the corner. As such, he was treated by a psychiatrist of Pondicherry.
Not one, but 13 years he discontinued the medications. Disease increased.
Two years ago, again brother has taken to the hospital. But, Babu was run away from the hospital.The search was fruitless everywhere. He complained with the local police station.

 

 

 

The man with dirty body at the Morgangate, Mangalore city, was talking very badly and sometimes screaming. He was stretching out his hand for rice / food. This person's attitude to the citizens was intolerable.

As it was, on 18th March 2019, someone telephoned the Manjeshwar Snehalaya Psycho Social Rehabilitation Centre for the Rehabilitation of Mental Illnesses. Snehalaya team reached out and took Mr. Babu. And next day admitted with hospital.

Upon control status discharged and brought back to Snehalaya and treated him with proper care. He has recovered from the effects and wished to move to the city in full recovery.
Babu was safely reached to Mumbai - Shraddha Rehabilitation Foundation. From there Shraddha taken to Babu’s native. The brother warmly welcomed him and accepted Mr. Babu.


 

15 ವರ್ಷದ ತೊಳಲಾಟ: ಊರೂರು ಸುತ್ತಿ ಬೀದಿಗೆ ಬಿದ್ದ ಬಾಬುಗೆ ಸ್ನೇಹಸ್ಪರ್ಶದಿಂದ ಮರುಜನ್ಮ

15 ವರ್ಷಗಳಿಂದ ಮಾನಸಿಕ ರೋಗದಿಂದ ತೊಳಲಾಡುತ್ತಿದ್ದ, ಎರಡು ವರ್ಷದಿಂದ ನಿಗೂಢ ಕಣ್ಮರೆಯಾಗಿದ್ದ ಆ ವ್ಯಕ್ತಿ ಈಗ ಎಲ್ಲರಿಗೂ ಆತ್ಮೀಯ. ಹೀಗೊಂದು ಪುನರ್ಜನ್ಮ ಅವರಿಗೆ ದಕ್ಕುವುದೆಂದು ಬಹುಷ: ಆಪ್ತ ಸಂಬಂಧಿಕರು ಕೂಡಾ ಭಾವಿಸಿರಲಿಕ್ಕಿಲ್ಲ. ಅವರೀಗ ದುಡಿಯುತ್ತಿದ್ದಾರೆ.... ಬದುಕುತ್ತಿದ್ದಾರೆ..... ಬದುಕನ್ನು ಆಸ್ವಾದಿಸುತ್ತಿದ್ದಾರೆ...... ಕಳೆದು ಹೋದ ವರ್ಷಗಳ ಬಗ್ಗೆ ಅವರೀಗ ಚಿಂತಿಸುತ್ತಿಲ್ಲ, ಮುಂದೆ, ತಾನೂ ಎಲ್ಲರಂತಾಗಬೇಕು, ಎಲ್ಲರ ಜೊತೆ ಬೆರೆಯಬೇಕು. ಹೀಗೆಲ್ಲ ಹೇಳುವಾಗ ತನಗೆ ಸಹಜ ಬಾಳು ಕರುಣಿಸಿದ ಸ್ನೇಹಾಲಯಕ್ಕೆ ಕೋಟಿ ನಮನ ಸಲ್ಲಿಸಿ ಆನಂದಭಾಷ್ಪ ಸುರಿಸುತ್ತಾರೆ.....

ಅವರು ಜೆ. ಬಾಬು, 58 ರ ಹರೆಯ. ತಮಿಳ್ನಾಡಿನ ಪಾಂಡಿಚ್ಚೇರಿ ಎಂಜಿಆರ್ ಸ್ಟ್ರೀಟ್ನಲ್ಲಿ ತಾಯ್ತಂದೆಯರ ಜೊತೆಗೆ ಪುಟ್ಟ ಸಂಸಾರ. ಹೀಗಿರುವಾಗ ಹೆತ್ತವರಿಬ್ಬರೂ ಕಾಯಿಲೆಗೆ ಬಿದ್ದು ಸಾವನ್ನಪ್ಪುತ್ತಾರೆ. ಬಾಬುವಿಗೆ ಬದುಕಿನಲ್ಲಿ ಒಂಟಿತನ ಕಾಡತೊಡಗಿತು. ಚಿಕ್ಕಮ್ಮನ ಮಗನ ಸಂಸಾರದ ಜೊತೆಗೆ ಅವರಿಗೆ ಸಹಾಯಕನಾಗಿ ಉಳಕೊಂಡಿದ್ದರು. ಆದರೂ, ತನ್ನ ಬಗ್ಗೆ ತನಗೇ ಕೀಳರಿಮೆ ಕಾಡತೊಡಗಿತು. ಮಾನಸಿಕ ದುಗುಡವು ಮನೋತಾಳವನ್ನು ತಪ್ಪಿಸತೊಡಗಿತು. ಮಾತು ಕಡಿಮೆಯಾಗಿ ಮೂಲೆಯಲ್ಲಿ ಮುದುಡಲಾರಂಭಿಸಿದರು. ಹಾಗೆ, ಪಾಂಡಿಚ್ಚೇರಿಯ ಖ್ಯಾತ ಮನೋರೋಗ ತಜ್ಞರಿಂದ ಚಿಕಿತ್ಸೆ ಕೊಡಿಸಿದರು. ಒಂದೆರಡಲ್ಲ, 13 ವರ್ಷಗಳ ಕಾಲ. ಸರಿಯಾಗಿ ಔಷಧಿ ಸೇವಿಸದಿರುವುದೂ ರೋಗದ ಉಲ್ಭಣಾವಸ್ಥೆಗೆ ಕಾರಣವಾಯಿತು.
ಎರಡು ವರ್ಷಗಳ ಹಿಂದೆ, ಸಹೋದರನು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ಅದೇನೋ, ಅವರ ಕಣ್ತಪ್ಪಿದ್ದೇ ತಡ, ತಿರುಗಿ ನೋಡಿದಾಗ ಬಾಬು ಅಲ್ಲಿರಲಿಲ್ಲ. ಎಲ್ಲೆಡೆ ಹುಡುಕಾಡಿಯೂ ಫಲವಿಲ್ಲದಾಯಿತು. ಸ್ಥಳೀಯ ಪೊಲೀಸು ಠಾಣೆಗೆ ದೂರು ಸಲ್ಲಿಸಲಾಗಿ ನಾಪತ್ತೆ ಪ್ರಕರಣ ದಾಖಲಿಸಿದ ಅವರೂ ಸಾಕಷ್ಟು ಪ್ರಯತ್ನಪಟ್ಟರು. ಬಾಬು ಪತ್ತೆಯೇ ಇಲ್ಲ.

ಮಂಗಳೂರು ನಗರದ ಮಾರ್ಗನ್ಗೇಟ್ ಬಳಿಯಲ್ಲಿ ಹರಕು ವಸ್ತ್ರ, ಕೊಳಕು ದೇಹದ ವ್ಯಕ್ತಿ ಅಸಂಬದ್ಧ ಮಾತನಾಡುತ್ತಾ ಕೆಲವೊಮ್ಮೆ ಕಿರುಚುತ್ತಾ ಅತ್ತಿಂದಿತ್ತ ಸುತ್ತುತ್ತಿದ್ದರು. ಕಂಡವರತ್ತ ಅನ್ನಕ್ಕಾಗಿ ಕೈ ಚಾಚುತ್ತಿದ್ದರು. ಕೊಡದಿರೆ ಬೆಂಬಿಡದೆ ಪೀಡಿಸುತ್ತಿದ್ದರು. ಅಲ್ಲೇ ಕೊಳಕು ಚರಂಡಿಯಲ್ಲಿ ಹೊರಳಾಡುತ್ತಿದ್ದರು. ನಾಗರಿಕರಿಗೆ ಈ ವ್ಯಕ್ತಿಯ ವರ್ತನೆ ಅಸಹನೀಯ ಎಂಬಂತಾಗಿತ್ತು. ಹಾಗೆ, ಯಾರೋ ಮಂಜೇಶ್ವರದ ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನಶ್ಚೇತನ ಕೇಂದ್ರಕ್ಕೆ ದೂರವಾಣಿ ಮಾಹಿತಿ ನೀಡಿದರು. ಇದೇ 2019 ರ ಮಾಚರ್್ 18. ಸ್ನೇಹಾಲಯ ತಂಡವು ತಲುಪಿ ಆ ವ್ಯಕ್ತಿಯನ್ನು ಕರೆದೊಯ್ದಿದೆ. ಒಂದು ದಿನ ವಿಶ್ರಾಂತಿಗೆ ಬಿಟ್ಟು ಮಾರನೇ ದಿನ ಯೇನಪೋಯ ಆಸ್ಪತ್ರೆಯಲ್ಲಿ ದಾಖಲಿಸಲಾಗುತ್ತದೆ. 20 ದಿನಗಳ ದಾಖಲು ಚಿಕಿತ್ಸೆಯಲ್ಲಿ ಆಕ್ರಮಣ ಶೀಲ ಪ್ರವೃತ್ತಿ ಕಡಿಮೆಯಾದದ್ದಲ್ಲದೆ ಸಾಮಾನ್ಯ ಸಹಜತೆಗೆ ಬಂದಿದ್ದರು. ಮರಳಿ ಸ್ನೇಹಾಲಯಕ್ಕೆ ಕರೆತಂದು ಸೂಕ್ತ ಆರೈಕೆಯಲ್ಲಿ ವಸತಿ ಕಲ್ಪಿಸಲಾಯಿತು. ಕೂಡಿ ಬಾಳುವಿಕೆ, ಆಟೋಟ, ಆಪ್ತ ಸಮಾಲೋಚನೆ ಫಲವಾಗಿ ಲಗುಬಗನೆ ಅವರು ಚೇತರಿಸಿದ್ದರು. ಪೂರ್ಣ ಗುಣಮುಖರಾಗಿ ಊರಿಗೆ ತೆರಳುವ ಇಂಗಿತ ವ್ಯಕ್ತಪಡಿಸಿದರು. ಬಾಬು ಅವರನ್ನು ಮುಂಬಯಿಯ ಶ್ರದ್ಧಾ ಪುನಶ್ಚೇತನ ಕೇಂದ್ರದ ಮೂಲಕ ಸುರಕ್ಷಿತವಾಗಿ ಊರಿಗೆ ತಲುಪಿಸಲಾಯಿತು. ಒಡಹುಟ್ಟಿದ್ದಲ್ಲದಿದ್ದರೂ ಆ ಸಹೋದರ ತಲುಪಿ ತನ್ನಣ್ಣನನ್ನು ಸ್ವೀಕರಿಸುತ್ತಾರೆ.

 

 

Comments powered by CComment

Home | About | NewsSitemapTerms and Conditions / Refund Policy | Contact

Copyright ©2014 www.snehalayamangalore.com.
Powered by eCreators

Contact Us :

Snehalaya Charitable Trust (R)

Head Office :

Door No. 15 - 21 / 1307 / 2,
Mascarenhas Compound,
2nd Cross Lower Bendoor,
Near Colaco Hospital, Kankanady Post,
Mangalore - 575 002

Operational Office:

D.No.: IV - 239 / H,
Bachalike, Pavoor Post,
Manjeshwar,
Kasargod District,
Kerala - 671 323

 

 

Tel. Ph.: (Land & Fax)
04998 - 273322
Mob.: 09446547033, 9036451931
Email: [email protected]