"ನಾನಿನ್ನು ಕುಡಿಯಲಾರೆ" : ಸ್ನೇಹನಿಧಿಗೆ ಹುಟ್ಟುಹಬ್ಬದ ಉಡುಗೊರೆ.....

          

ಹಾಲೇಶ ಇನ್ನು ಹೆಂಡ ಮುಟ್ಟಲಾರ... ಮುದುಡಿ ಕೂರಲಾರ....  "ದೇವರಾಣೆಗೂ ಇಲ್ಲ ಸಾರ್, ನನ್ನ ಮಕ್ಕಳ ಮೇಲಾಣೆ.... ಹೆಂಡದ ಬಳಿಯಲ್ಲೂ ಸುಳಿದಾಡೆನು" ಅನ್ನುವ ಆತನ ಖಚಿತ ನುಡಿಯು "ಸ್ನೇಹಾಲಯ"ದ ಮುಖ್ಯಸ್ಥ ಬ್ರದರ್ ಜೋಸೆಫ್ ಕ್ರಾಸ್ತಾ ಅವರಿಗೆ ದೊರೆತ ಜನುಮದಿನದ ಉದಾತ್ತ ಉಡುಗೊರೆಯಾಯಿತು. ಕತ್ತಲೆಯಿಂದ ಬೆಳಕಿನತ್ತ, ಸಹಜ ಬಾಳಿನತ್ತ ದೃಢ ಹೆಜ್ಜೆಯಿರಿಸಿದ ಹಾಲೇಶನ ಬೀಳ್ಕೊಡುಗೆಯೂ ಬ್ರದರ್ ಜೋಸೆಫ್ ಕ್ರಾಸ್ತಾರ ಹುಟ್ಟುಹಬ್ಬವೂ ಒಂದೇ ದಿನವಾದುದು ಸ್ನೇಹಾಲಯದ ಪುಣ್ಯ ನಿಮಿಷವಾಯಿತು. ಹಾಗೆ, ಅಲ್ಲಿನ ಸರ್ವರೂ ಈ ದಿನವನ್ನು ಸಂಭ್ರಮಿಸಿದರು, ಪ್ರೀತಿಯಿಂದ ಆ ಯುವಕನನ್ನು ಶುಭ ಹಾರೈಸಿ ಬೀಳ್ಕೊಟ್ಟರು.

ಹಾಲೇಶ..... ಕನರ್ಾಟಕ ದಾವಣಗೆರೆಯ ಹರಪನಹಳ್ಳಿ ನಿವಾಸಿ. 30 ರ ಹರೆಯ. ದಿನಕೂಲಿ ಕಾಮರ್ಿಕ. ಬಡ ಕುಟುಂಬದ ಆಧಾರ ಸ್ತಂಭವಾಗಬೇಕಾದವ. ಆದರೇನು ಮಾಡುವುದು.... ಚಿಕ್ಕಂದಿನಲ್ಲೇ ಮದ್ಯದ ಗೀಳನ್ನು ಮೈಗೂಡಿಸಿಕೊಂಡಿದ್ದ. ಮದ್ಯದ ಮಾದಕ ನಶೆಯಲ್ಲಿ ತೇಲಾಡತೊಡಗಿದ್ದ. ದುಡಿದದ್ದೆಲ್ಲವೂ ಕರುಳು ಪೂತರ್ಿ ಸಾರಾಯಿ ಕುಡಿಯಲು ಮಾತ್ರ ಸಾಲುತ್ತಿತ್ತು. ಪತ್ನಿ, ಪುಟಾಣಿಯರಾದ ಹೆಣ್ಮಕ್ಕಳು ಉಪವಾಸ ಬೀಳುತ್ತಿದ್ದ ದಿನಗಳು.... ಆ ಮನೆಯಲ್ಲಿ ನೆಮ್ಮದಿಯಿರಲಿಲ್ಲ. ಗಂಡನನ್ನು ಸರಿಪಡಿಸಲು ಮುಂದಾಗುವ ಪತ್ನಿಯು ಮದ್ಯರಾಕ್ಷಸನ ತಾಂಡವಕ್ಕೆ ಬಲಿಯಾಗುತ್ತಿದ್ದಳು.....  ಹಾಲೇಶನ ಮದ್ಯದ ಗೀಳು ಎಷ್ಟರ ಮಟ್ಟಿಗೆ ಬೆಳೆದಿತ್ತೆಂದರೆ ಕುಡಿಯದೆ ಆತನ ದೇಹ ಚಲಿಸುತ್ತಲೇ ಇರಲಿಲ್ಲ. ಕುಡಿತದ ನೆನಪು ಮಾತ್ರವುಳಿದಾಗ ಮನಸ್ಸಿನ ತಾಳದ ಹಳಿ ತಪ್ಪುತ್ತಿತ್ತು.           

ಹಾಗೊಂದು ದಿನ.... ಸರಿಸುಮಾರು ಐದು ವರ್ಷಗಳ ಹಿಂದೆ, ಮನೆಯಿಂದ ಕೆಲಸಕ್ಕೆ ತೆರಳಿದ್ದ ಹಾಲೇಶ ಮರಳಿ ಮನೆ ಸೇರಿರಲಿಲ್ಲ. ಪತ್ನಿ ನೇತ್ರಾವತಿ, ಒಂಭತ್ತು ಹಾಗೂ ಐದರ ಹರೆಯದ ಹೆಣ್ಮಕ್ಕಳು ಗತಿಗೆಟ್ಟು ಹೋದರು. ಎಲ್ಲೆಡೆ ಹುಡುಕಾಡಿದರು. ಪೊಲೀಸು ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾದದ್ದು ಬಿಟ್ಟರೆ ಬೇರಾವ ಫಲವೂ ಕಾಣಲಿಲ್ಲ. ಕುಟುಂಬಕ್ಕೆ ಅನಾಥತ್ವ ಕಾಡಿದ ದಿನಗಳು. ಮಕ್ಕಳ ಪಾಲನೆಗಾಗಿ ನೇತ್ರಾವತಿ ಮುಂದಾಗಿದ್ದರು. ಅವರಿವರ ಮನೆಯಲ್ಲಿ ದುಡಿದು ಕಷ್ಟಪಟ್ಟು ಕರುಳ ಕುಡಿಗಳ:ನ್ನು ಸಾಕುತ್ತಿದ್ದರು. ದೂರದ ನಿರೀಕ್ಷೆ ಬಾಕಿಯಿರಿಸಿ ಗಂಡನ ಬರುವಿಕೆಗಾಗಿ ಪ್ರಾಥರ್ಿಸುತ್ತಿದ್ದರು.... ಹೌದು! ಇಂದು ಅವರ ಪ್ರಾರ್ಥನೆ ಫಲಿಸಿದೆ. ಐದು ವರ್ಷ ಹಿಂದೆ ಮನೆಯಿಂದ ತೆರಳಿದ್ದ ಕುಡುಕನಾಗಿದ್ದ ಪತಿರಾಯ ಇಂದು ಮರಳಿ ಮನೆ ಸೇರಿದ್ದಾರೆ... ಪೂರ್ಣ ಬದಲಾಗಿ. ಕುಡಿಯುವನಾದರೂ ಗಂಡ ಬೇಕೆಂಬ ಕೊರಗು ಮಾತ್ರ ಅವರದ್ದಾಗಿತ್ತು. ಆದರೀಗ ಕುಡಿತದ ದಾಸ್ಯತನದಿಂದ ಸಂಪೂರ್ಣ ಮುಕ್ತನಾಗಿ ಮನೆ ಸೇರಿದ್ದಾರೆ.  ಇಷ್ಟಕ್ಕೂ ತಮ್ಮ ಇಡೀ ಕುಟುಂಬವನ್ನು ಪಾರು ಮಾಡಿದ ಸ್ನೇಹಾಲಯಕ್ಕೆ ಕೋಟಿ ನಮನ......            

ಐದು ವರ್ಷ ಹಿಂದೆ ಮನೆ ಬಿಟ್ಟಿದ್ದ ಹಾಲೇಶ ಕಳೆದೊಂದು ವರ್ಷದಿಂದ ಸ್ನೇಹಮನೆಯ ಆರೈಕೆಯಲ್ಲಿದ್ದಾರೆ. ಅದಕ್ಕೂ ಮೊದಲಿನ ನಾಲ್ಕು ವರ್ಷ ಅವರು ಎಲ್ಲಿದ್ದರು, ಹೇಗಿದ್ದರೆಂಬುದು ಅವರಿಗೂ ಗೊತ್ತಿಲ್ಲ, ಅದೊಂದು ಬಿಡಿಸಲಾರದ ಗಂಟು. 2018 ರ ಸಪ್ತಂಬರ 28. ಮಂಗಳೂರು ನಗರದ ಮಣ್ಣಗುಡ್ಡೆ ಬಸ್ಸು ನಿಲ್ದಾಣದಲ್ಲಿ ಹರಕು ವಸ್ತ್ರ ತೊಟ್ಟು ಹಣಕ್ಕಾಗಿ ನಾಗರಿಕರನ್ನು ಪೀಡಿಸುತ್ತಿದ್ದ ಕೃಶಕಾಯದ ಮನೋರೋಗಿಯ ಬಗ್ಗೆ ಅರಿತು ಬ್ರದರ್ ಜೋಸೆಫ್ ಕ್ರಾಸ್ತಾ ನೇತೃತ್ವದ ಸ್ನೇಹಾಲಯ ಕಾರ್ಯಕರ್ತರು ತೆರಳಿ ಆತನನ್ನು ಕರೆತಂದಿದ್ದರು. ಮಂಗಳೂರು ಯೇನಪೋಯ ಆಸ್ಪತ್ರೆಯ ಮಾನಸಿಕ ರೋಗ ವಿಭಾಗದಲ್ಲಿ ದಾಖಲಿಸಿ ತಜ್ಞ ಚಿಕಿತ್ಸೆ, ಮುಂದೆ ಸ್ನೇಹದ ಮನೆಯಲ್ಲಿ ಆಶ್ರಯ, ಆರೈಕೆ.... ನಾಲ್ಕು ಹೊತ್ತು ಆಹಾರ, ಆಟೋಟ, ಪ್ರಾರ್ಥನೆ, ವ್ಯಾಯಾಮ, ಯೋಗ, ಧ್ಯಾನ, ಆಪ್ತ ಸಮಾಲೋಚನೆಯ ಫಲವಾಗಿ ಆತ ಸಹಜತೆಗೆ ಬಂದಿದ್ದ. ಎಲ್ಲರ ಜೊತೆ ಬೆರೆಯತೊಡಗಿದ. ಸ್ನೇಹಾಲಯ ಚಟುವಟಿಕೆಗಳಲ್ಲಿ ಸಹಕರಿಸುತ್ತಿದ್ದ........ ಹಾಗೆ, ಸಹಜ ವ್ಯಕ್ತಿಯಾಗಿ ರೂಪುಗೊಂಡಿದ್ದ. ಈಗ, ಹಾಲೇಶ ಎಲ್ಲವನ್ನೂ ನೆನಪಿಸತೊಡಗಿದ್ದ. ತನ್ನ ಕೆಟ್ಟ ಚಟದಿಂದ ಈ ರೀತಿಯಾಗಿರುವುದನ್ನು ಅರಿತು ಮರುಗಿದ. ಬ್ರದರ್ ಬಳಿ ಬಂದು ಗೋಳೋ ಎಂದು ಅತ್ತನಲ್ಲದೆ ಮನೆಗೆ ಹೋಗುವ ಇಂಗಿತ ವ್ಯಕ್ತಪಡಿಸಿದ. ಆತ ತಿಳಿಸಿದ ವಿಳಾಸಕ್ಕೆ ಸ್ನೇಹಾಲಯದ ಪತ್ರ ರವಾನೆಯಾಯಿತು. ಪತ್ರಕ್ಕೆ ಸೂಕ್ತವಾಗಿ ಸ್ಪಂದಿಸಿದ ಹಾಲೇಶನ ಕುಟುಂಬಿಕರು ಅದೋ ಇಂದು ಸ್ನೇಹಾಲಯಕ್ಕೆ ತಲುಪಿದ್ದಾರೆ. ಈ ಪುಣ್ಯ ಸೇವೆಗೆ ಕೃತಜ್ಞತೆಯಪರ್ಿಸಿದ್ದಾರೆ.... ಹಾಗೆ....ಕುಡಿತ ಬಿಡುವ ಪ್ರಮಾಣ ಮಾಡಿ ಬ್ರದರ್ಗೆ ಆ ಮೂಲಕ ಹುಟ್ಟು ಹಬ್ಬದ ಸಿಹಿಯನ್ನುಣ್ಣಿಸಿ ಹಾಲೇಶ ಊರಿಗೆ ತೆರಳಿದ್ದಾರೆ.................  ಶುಭ ನಿರೀಕ್ಷೆಯೊಂದಿಗೆ................

Comments powered by CComment

Home | About | NewsSitemapTerms and Conditions / Refund Policy | Contact

Copyright ©2014 www.snehalayamangalore.com.
Powered by eCreators

Contact Us :

Snehalaya Charitable Trust (R)

Head Office :

Door No. 15 - 21 / 1307 / 2,
Mascarenhas Compound,
2nd Cross Lower Bendoor,
Near Colaco Hospital, Kankanady Post,
Mangalore - 575 002

Operational Office:

D.No.: IV - 239 / H,
Bachalike, Pavoor Post,
Manjeshwar,
Kasargod District,
Kerala - 671 323

 

 

Tel. Ph.: (Land & Fax)
04998 - 273322
Mob.: 09446547033, 9036451931
Email: [email protected]