Gandhiji said that God is the servant of the poor, God is the service of the poor. The Snehalaya Manjeshwar is a story about the virtue of a goddess guardian for a woman who is a Sridevi.

The life of a 41-year-old woman named Sridevi is indeed the most thrilling ... The story of her life is a tragedy. But ..... the woman who was in a state of chasm was left in a Snehalaya's embrace, and the prospect of her future being broken ........

Someone had brought to the notice of the local police about a mentally ill young woman walking around Kumble in Kasargod district. She was completely paranoid. She was murmuring something, sometimes crying, going on violence. Her body was soaked. She was dirty, left long, and dressed in rag. The police were distracted for a moment, not knowing what to do. But then, someone told them about the Snehalaya. Likewise, on October 10, Kumble police briught the woman to a Snehalaya. Under the direction of Brother Joseph Crasta, she was accepted and provided with adequate care, loving care, and food. She is constantly undergoing close consultation in the areas of sports, yoga, and daily activities. She remembers herself, in just 20 days. Sridevi saying that her home is in Kudloor VC Chavadi, Tamil Nadu. Then, snehalaya team posted an letter to her home. When the letter received by them, they were very happy and contacted by telephone on Wednesday. The next day Sridevi's mother Amuda, brother Madivanan and son Bharat arrived to the Snehalaya. When the mother delighted in seeing the daughter, she hugged the brother. Joseph Crasta and cried.and said, i had a dobut that my daughter is no more. You have given new born to her. I will only take her if you will. Let her stay, if she wishes. If anything is good for my daughter," said the mother. Joseph Crasta reassures Sridevi that she can be happy no matter how long, when she says, "This is my heaven, I want to be here" as a complement to my mother's words.

 

 

 

Sridevi was a poor brood with her husband and two children. However, when husband left her children 10 years ago, she had to venture out to swim in order to survive, even though she was not an orphan. She hired and nurtured children. Her daughter was very skilful in reading, ahead of everyone else in the class. After graduation she was admitted to the law degree. Her son Bharath is like another kind of divine. Sridevi's life became the same. Too little income, too much trouble for an agreed meal. So children's education is impossible. The young woman was in her final year of law school. In next year, she was complete education and was a lawyer. But, Sridevi cannot be bothered to teach that last year. She departed from education and put her to work in another company. No relative was there to support her education. Unfortunately in the sleeping room of her house, choked a tightrope and said goodbye to her life. Sridevi, who saw the immobile body of her daughter hanging in the rope, fell unconscious......Days of healing despite her consciousness, she lost her mind. She began to cuddle in the corner of the house, sometimes groaning. No one was allowed to hover over them. Finally, Sridevi and son Bharat are taken to their home by their mother Amudar. Her condition was worsening. But ..... the tragedy didn't end there. Four months ago, when the mood of the family was diverted, Sridevi left the house ..... There was a case of missing in the station. However, Sridevi, who had not seen anyone's eye. Finally kumbla police found her and sought shelter at Snehalaya for the past one month. Yes, this is the called of God's existence. .....

Brother Joseph Crasta says the Snehalaya protects Sridevi and her son and facilitates son's study.....


 

ಶ್ರೀದೇವಿಯ ಪಾಲಿಗೆ ಸ್ನೇಹಾಲಯವೇ ದೇವಾಲಯ......... ಕರುಳು ಹಿಂಡುವ,, ಓದಲೇ ಬೇಕಾದ ಕಥೆಯಿದೆ....

ದೇವರೆಂದರೆ ಯಾರು..... ಬಡವರ ಸೇವಕನೇ ದೇವರು, ಬಡವರ ಸೇವೆಯೇ ದೇವಕಾರ್ಯ ಎಂದು ಗಾಂಧೀಜಿ ಹೇಳಿದ್ದಾರೆ. ಶ್ರೀದೇವಿ ಎಂಬ ನತದೃಷ್ಟೆ ಮಹಿಳೆಯ ಪಾಲಿಗೆ ಮಂಜೇಶ್ವರ ಸ್ನೇಹಾಲಯ ಅಭಯ ಕೇಂದ್ರವು ದೇವರಾಗಿ ರಕ್ಷಕನಾದ ಪುಣ್ಯದ ಕಥೆಯಿದು.
ಶ್ರೀದೇವಿ ಎಂಬ 41 ರ ಹರೆಯದ ಮಹಿಳೆಯ ಬದುಕು ನಿಜಕ್ಕೂ ಅತ್ಯಂತ ರೋಚಕ... ಅವರ ಬಾಳ ವ್ಯಥೆಯ ಕಥೆ ಕೇಳಿದರೆ ಅಯ್ಯೋ ಎನಿಸದಿರದು. ಆದರೆ..... ಬದುಕೇ ಕಮರಿ ಹೋಯಿತೆಂಬ ಸ್ಥಿತಿಯಲ್ಲಿದ್ದ ಆ ಮಹಿಳೆಯು ಸ್ನೇಹಾಲಯದ ತೆಕ್ಕೆಗೆ ಬಿದ್ದಿರುವುದರಿಂದ ಅವರ ಭವಿಷ್ಯದಲ್ಲಿಂದು ನಿರೀಕ್ಷೆಯ ಚಿಗುರು ಬಿರಿಯುವಂತಾಗಿದೆ........

ಕಾಸರಗೋಡು ಜಿಲ್ಲೆಯ ಕುಂಬಳೆ ಆಸುಪಾಸಿನಲ್ಲಿ ಮಾನಸಿಕ ರೋಗಿ ಯುವತಿ ನಡೆದಾಡುತ್ತಿರುವ ಬಗ್ಗೆ ಯಾರೋ ಮಂದಿಯು ಸ್ಥಳೀಯ ಪೊಲೀಸರ ಗಮನಕ್ಕೆ ತಂದಿದ್ದರು. ಆಕೆಯು ಪೂರ್ಣ ಮತಿವಿಕಲೆಯಾಗಿದ್ದಳು. ಏನೇನೋ ಗೊಣಗುತ್ತಿದ್ದಳು, ಕೆಲವೊಮ್ಮೆ ಅಟ್ಟಹಾಸಗೈಯ್ಯುತ್ತಿದ್ದಳು, ಹಿಂಸೆಗೆ ಮುಂದಾಗುತ್ತಿದ್ದಳು. ಆಕೆಯ ದೇಹ ಸೊರಗಿತ್ತು. ಕೊಳಕು ಕೊಳಕಾಗಿ, ಉದ್ದನೆ ಜಡೆ ಬಿಟ್ಟು, ಚಿಂದಿ ಬಟ್ಟೆ ಧರಿಸಿದ್ದಳು. ತುಂಬು ಯುವತಿ ಬೇರೆ. ಪೊಲೀಸರಿಗೆ ಏನು ಮಾಡಬೇಕೆಂದು ತೋಚದೆ ಒಂದು ಕ್ಷಣ ವಿಚಲಿತರಾದರು. ಆದರೆ, ಯಾರೋ ನಾಗರಿಕರು ಸ್ನೇಹಾಲಯದ ಬಗ್ಗೆ ಹೇಳಿದ್ದರು. ಹಾಗೆ, ಇದೇ ಅಕ್ಟೋಬರ 10 ರಂದು ಕುಂಬಳೆ ಪೊಲೀಸರು ಆ ಮಹಿಳೆಯನ್ನು ಸ್ನೇಹಾಲಯಕ್ಕೆ ಕರೆ ತರುತ್ತಾರೆ. ಬ್ರದರ್ ಜೋಸೆಫ್ ಕ್ರಾಸ್ತಾರ ನೇತೃತ್ವದಲ್ಲಿ ಆಕೆಯನ್ನು ಸ್ವೀಕರಿಸಿ ಮುಂದೆ ಸೂಕ್ತ ಚಿಕಿತ್ಸೆ, ಪ್ರೀತಿಯ ಆರೈಕೆ, ನಾಲ್ಕು ಹೊತ್ತು ಆಹಾರವಿತ್ತು ಆಕೆಗೆ ವಸತಿ ಕಲ್ಪಿಸಲಾಗುತ್ತದೆ. ಆಟೋಟ, ಯೋಗ,, ದೈನಂದಿನ ಚಟುವಟಿಕೆಗಳಲ್ಲಿ ಎಲ್ಲರ ಜೊತೆಗೆ ಬೆರೆಯುತ್ತಿದ್ದ ಆಕೆಯನ್ನು ನಿರಂತರ ಆಪ್ತ ಸಮಾಲೋಚನೆಗೆ ಒಳಪಡಿಸಲಾಗುತ್ತಿದೆ. ಕೇವಲ 20 ದಿನಗಳಲ್ಲಿ ಸಹಜತೆಗೆ ಬಂದ ಆಕೆಯು ತನ್ನನ್ನು, ತನ್ನವರನ್ನು ನೆನಪಿಸುತ್ತಾಳೆ. ತಮಿಳ್ನಾಡು ಪಾಂಡಿಚ್ಚೇರಿಯ ಕುಡ್ಲೂರು ವಿ.ಸಿ ಚಾವಡಿ ಎಂಬಲ್ಲಿ ತನ್ನ ಮನೆಯೆಂದು ಶ್ರೀದೇವಿ ತಿಳಿಸಿದ ಮೇರೆಗೆ ಸ್ನೇಹಾಲಯದ ಪತ್ರ ರವಾನೆಯಾಗುತ್ತದೆ. ಪತ್ರ ಬಂದದ್ದೇ ತಡ, ಮೊನ್ನೆ ಬುಧವಾರ (ನವಂಬರ ಆರರಂದು) ದೂರವಾಣಿ ಮೂಲಕ ಸಂಪಕರ್ಿಸಿದ ಸಂಬಂಧಿಕರು ಮಾಹಿತಿ ಕೋರುತ್ತಾರೆ. ಮರುದಿನವೇ ಶ್ರೀದೇವಿಯ ವಯೋವೃದ್ಧೆ ಮಾತೆ ಅಮುದಾ, ಸಹೋದರ ಮದಿವಾಣನ್ ಹಾಗೂ ಪುತ್ರ ಭರತ್ ಎಂಬವರು ಸ್ನೇಹದ ಮನೆಗೆ ತಲುಪುತ್ತಾರೆ. ಪುತ್ರಿಯನ್ನು ಕಂಡ ಸಂತೋಷದಲ್ಲಿ ಆನಂದಭಾಷ್ಪ ಸುರಿಸಿದ ಆ ಮಾತೆಯು ಸ್ನೇಹಾಲಯದ ಬ್ರದರ್ ಜೋಸೆಫ್ ಕ್ರಾಸ್ತಾರನ್ನು ಅಪ್ಪಿ ಹಿಡಿದು " ನಿಂಗೋ ಎನ್ನ ಕಡವೂಳೈ" ಎಂದು ಮಾಮರ್ಿಕವಾಗಿ ನುಡಿದು ಅತ್ತಾಗ ಅಲ್ಲಿನ ನಿವಾಸಿಗಳು ಆ ಧನ್ಯ ಮುಹೂರ್ತದಲ್ಲಿ ಸಹಭಾಗಿಗಳಾದರು. "ನನ್ನ ಪುತ್ರಿ ಬದುಕಿ ಉಳಿದಿರುವಳೇ ಎಂಬ ಸಂಶಯವಿತ್ತು. ನೀವಾಕೆಗೆ ಮರುಜನ್ಮ ಕರುಣಿಸಿದ್ದೀರಿ. ನೀವು ಅನುಮತಿಸಿದರೆ ಮಾತ್ರ ಕರೆದೊಯ್ಯುವೆ. ಅವಳು ಬಯಸುವುದಿದ್ದರೆ ಇಲ್ಲೇ ಇರಲಿ. ಏನಿದ್ದರೂ ನನ್ನ ಮಗಳು ಚೆನ್ನಾಗಿದ್ದರೆ ಸಾಕು" ಎನ್ನುತ್ತಾರೆ ತಾಯಿ. ಅಮ್ಮನ ಮಾತಿಗೆ ಪೂರಕ ಎಂಬಂತೆ "ಇದು ನನ್ನ ಸ್ವರ್ಗ, ಇಲ್ಲೇ ಇರಲು ಬಯಸುವೆ" ಎಂದು ಶ್ರೀದೇವಿ ದನಿಗೂಡಿಸಿದಾಗ ಎಷ್ಟು ಕಾಲ ಬೇಕಿದ್ದರೂ ಖುಷಿಯಾಗಿ ಇಲ್ಲೇ ಇರಬಹುದೆಂದು ಶ್ರೀದೇವಿಗೆ ಜೋಸೆಫ್ ಕ್ರಾಸ್ತಾ ಧೈರ್ಯ ತುಂಬಿದ್ದಾರೆ.

ಶ್ರೀದೇವಿಯದ್ದು ಪತಿ, ಇಬ್ಬರು ಮಕ್ಕಳನ್ನು ಕೂಡಿದ ಬಡ ಸಂಸಾರವಾಗಿತ್ತು. ಆದರೆ, 10 ವರ್ಷಗಳ ಹಿಂದೆ ಕೈಹಿಡಿದ ಪತಿರಾಯನು ಮಡದಿ, ಮಕ್ಕಳನ್ನು ತೊರೆದು ತೆರಳಿದಾಗ ಆಕೆಗೆ ಅನಾಥತ್ವ ಕಾಡದಿದ್ದರೂ ಬದುಕೆಂಬ ಸಮರದಲ್ಲಿ ಈಜಾಡಲು ಸಾಹಸಪಡುವುದು ಅನಿವಾರ್ಯವಾಯಿತು. ಕೂಲಿನಾಲಿ ಮಾಡಿ ಮಕ್ಕಳನ್ನು ಚೆನ್ನಾಗಿಯೇ ಸಾಕುತ್ತಿದ್ದಳು. ಹಿರಿಯ ಕುವರಿ ಯುವಸ್ತಿ... ಓದಿನಲ್ಲಿ ಅತ್ಯಂತ ಜಾಣೆ, ತರಗತಿಯಲ್ಲಿ ಎಲ್ಲರಿಗಿಂತಲೂ ಮುಂದು. ಆಕೆಯ ಇಷ್ಟದಂತೆ ಪದವಿ ಬಳಿಕ ಕಾನೂನು ಪದವಿಗೆ ಸೇರಿಸಲಾಯಿತು. ಕಿರಿಯಾತ ಭರತ್. ಆದರೆ..... ತಾನೊಂದು ಬಗೆದರೆ ದೈವ ಇನ್ನೊಂದು ಬಗೆಯುತ್ತಾನಂತೆ. ಶ್ರೀದೇವಿಯ ಬದುಕಲ್ಲೂ ಅದೇ ಆಯಿತು. ತೀರಾ ಪುಟ್ಟ ಆದಾಯ, ಒಪ್ಪೊತ್ತಿನ ಊಟಕ್ಕೂ ತ್ರಾಸ ಪಡುವ ದೀನ ಸ್ಥಿತಿ. ಹಾಗಿರುವಾಗ ಮಕ್ಕಳ ಕಲಿಕೆ ಯೋಚಿಸುವುದೇ ಸಾಧ್ಯವಿಲ್ಲದ ಮಾತು. ಯುವಸ್ತಿಯು ಅಂತಿಮ ವರ್ಷ ಕಾನೂನು ಪದವಿ ಓದುತ್ತಿದ್ದಳು. ಇನ್ನೇನು ಒಂದು ವರ್ಷದಲ್ಲಿ ಶಿಕ್ಷಣ ಪೂತರ್ಿಗೊಳಿಸಿ ವಕೀಲೆಯ ಪೋಷಾಕು ಧರಿಸುವ ಹಂತದಲ್ಲಿದ್ದಳು. ಆದರೆ, ಆ ಒಂದು ವರ್ಷ ಕಲಿಸುವುದು ಶ್ರೀದೇವಿಗೆ ಚಿಂತಿಸಲೂ ಆಗದು. ಕುವರಿಯ ಶಿಕ್ಷಣಕ್ಕೆ ತಿಲಾಂಜಲಿ ನೀಡಿ ಆಕೆಯನ್ನು ಯಾವುದೋ ಕಂಪೆನಿಯಲ್ಲಿ ಕೆಲಸಕ್ಕೆ ಸೇರಿಸಲು ಮುಂದಾಗುತ್ತಾಳೆ. ಇದನ್ನರಿತ ಆ ಪ್ರತಿಭಾವಂತೆ ಕುವರಿಗೆ ಆಕಾಶವೇ ಕಳಚಿ ಬಿದ್ದಂತಾಗುತ್ತದೆ. ಸಂಬಂಧಿಕರ ಮೊರೆ ಹೋದರೂ ಅವಳ ಕಲಿಕೆಗೆ ನೆರವಾಗಲು ಯಾರೂ ಮುಂದಾಗಿರಲಿಲ್ಲ. ನೊಂದ ಮಗಳು ಐದು ತಿಂಗಳ ಹಿಂದೆ ಮನೆಯ ಮಲಗು ಕೋಣೆಯಲ್ಲಿ ಕೊರಳಿಗೆ ಉರುಳು ಬಿಗಿದು ತನ್ನ ಬದುಕಿಗೇ ವಿದಾಯ ಹಾಡುತ್ತಾಳೆ. ಹಗ್ಗದಲ್ಲಿ ನೇತಾಡುವ ಮಗಳ ನಿಶ್ಚಲ ದೇಹವನ್ನು ಕಂಡ ಶ್ರೀದೇವಿ ಪ್ರಜ್ಞಾಹೀನಳಾಗಿ ಧೊಪ್ಪನೆ ಬೀಳುತ್ತಾಳೆ. ದಿನಗಳ ಚಿಕಿತ್ಸೆ.... ಪ್ರಜ್ಞೆ ಬಂದರೂ ಆಕೆಯ ಮನೋತಾಳ ತಪ್ಪಿ ಹೋಗಿತ್ತು. ಮನೆಯ ಮೂಲೆಯಲ್ಲಿ ಮುದುಡಲಾರಂಭಿಸಿದಳು, ಕೆಲವೊಮ್ಮೆ ವಿಕೃತವಾಗಿ ಚೀರಾಡುತ್ತಿದ್ದಳು. ಯಾರನ್ನೂ ಬಳಿಗೆ ಸುಳಿದಾಡಲು ಬಿಡುತ್ತಿರಲಿಲ್ಲ. ಕೊನೆಗೆ ಶ್ರೀದೇವಿ ಹಾಗೂ ಪುತ್ರ ಭರತ್ನನ್ನು ತಾಯಿ ಅಮುದಾರು ತಮ್ಮ ಮನೆಗೆ ಕರೆದೊಯ್ಯುತ್ತಾರೆ. ಆಕೆಯ ಸ್ಥಿತಿ ಬಿಗಡಾಯಿಸುತ್ತಿತ್ತು. ಅಮ್ಮನ ಸ್ಥಿತಿಯಿಂದ ಕಂಗಾಲಾದ ಒಂಭತ್ತನೇ ತರಗತಿ ವಿದ್ಯಾಥರ್ಿ ಭರತನೂ ಕಲಿಕೆ ಮೊಟಕುಗೊಳಿಸಿ ಅಮ್ಮನಿಗೆ ನೆರವಾಗುತ್ತಿದ್ದ. ಆದರೆ..... ದುರಂತ ಅಲ್ಲಿಗೆ ಮುಗಿಯಲಿಲ್ಲ. ನಾಲ್ಕು ತಿಂಗಳ ಹಿಂದೆ ಮನೆಯವರ ಚಿತ್ತ ಬೇರೆಡೆಗೆ ಹರಿದಾಗ ಮನೆಯಿಂದ ಹೊರಬಂದ ಮತಿವಿಕಲೆ ಶ್ರೀದೇವಿಯು ನಡೆದೇ ಬಿಟ್ಟಿದ್ದಳು..... ಅಲ್ಲಿನ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ಆದರೆ, ಯಾರ ಕಣ್ಣಿಗೂ ಬೀಳದಿದ್ದ ಶ್ರೀದೇವಿ ಎರಡು ತಿಂಗಳ ಹಿಂದೆ ಕಾಸರಗೋಡಿನ ಕುಂಬಳೆಯಲ್ಲಿ ಪೊಲೀಸರಿಗೆ ಕಣ್ಣಿಗೆ ಬಿದ್ದು, ಕಳೆದೊಂದು ತಿಂಗಳಿನಿಂದ ಸ್ನೇಹಾಲಯದ ಆಶ್ರಯ ಹೊಂದುವಂತಾಗಿದೆ..... ಹೌದು..... ಇದನ್ನೇ ದೇವರ ಕರೆ ಅನ್ನೋದು....... ಇಲ್ಲವಾದಲ್ಲಿ ಪಾಂಡಿಚ್ಚೇರಿಯ ಶ್ರೀದೇವಿ ಕುಂಬಳೆಗೆ ಬಂದು ಬೀಳಬೇಕಿತ್ತೇ........

ಶ್ರೀದೇವಿ ಹಾಗೂ ಪುತ್ರನನನ್ನು ಸ್ನೇಹಾಲಯವು ಸಂರಕ್ಷಿಸುವುದಾಗಿರೂ, ಮಗನ ವ್ಯಾಸಂಗಕ್ಕೆ ಸೌಕರ್ಯ ಕಲ್ಪಿಸುವುದಾಗಿಯೂ ಬ್ರದರ್ ಜೋಸೆಫ್ ಕ್ರಾಸ್ತಾ ಹೇಳುತ್ತಾರೆ

Add comment


Security code
Refresh

Home | About | NewsSitemapTerms and Conditions / Refund Policy | Contact

Copyright ©2014 www.snehalayamangalore.com.
Powered by eCreators

Contact Us :

Snehalaya Charitable Trust (R)

Head Office :

Door No. 15 - 21 / 1307 / 2,
Mascarenhas Compound,
2nd Cross Lower Bendoor,
Near Colaco Hospital, Kankanady Post,
Mangalore - 575 002

Operational Office:

D.No.: IV - 239 / H,
Bachalike, Pavoor Post,
Manjeshwar,
Kasargod District,
Kerala - 671 323

 

 

Tel. Ph.: (Land & Fax)
04998 - 273322
Mob.: 09446547033, 9036451931
Email: [email protected]