ಬದುಕೆಂಬ ಬಂಡಿಯ ದಾರ ಪೋಣಿಸಲು ಕೂಲಿನಾಲಿ ಮಾಡಿ ಬೆವರಿಳಿಸಿ ದುಡಿದು ತಿಂಗಳ ಬಳಿಕ ಚೀಲ ತುಂಬಾ ಮನೆ ಸಾಮಗ್ರಿ, ಮಕ್ಕಳಿಗೆ ಸಿಹಿತಿಂಡಿ ಹೊತ್ತು ತರುತ್ತಿದ್ದಂತೆ ತುಂಬಿದ ಬಡ ಸಂಸಾರದ ಯಜಮಾನನಾದ ಆತನಿಗೆ ದಿಢೀರನೇ ಅದೇನಾಯ್ತೋ.......... ಮನೆಯ ಹಾದಿಯನ್ನೇ ಮರೆತು ಬಿಟ್ಟಿದ್ದ...... ಹೀಗೆಯೂ ಮನೋತಾಳ ತಪ್ಪುವುದೇ?... ಹೌದು, ಅವರು ಮನೆಯನ್ನು ಹುಡುಕುತ್ತಲೇ ಸಾಗಿದ್ದರು, ಕಂಡಕಂಡವರಲ್ಲಿ "ನನ್ನ ಮನೆ ಎಲ್ಲಿ" ಎಂದು ಕೇಳುತ್ತಿದ್ದರು. ಆದರೆ, ತಾನ್ಯಾರು, ತನ್ನವರಾರು ಎಂಬುವುದನ್ನು ಕೂಡಾ ಗುರುತಿಸಲಾರದ ದೀನ ಪರಿಸ್ಥಿತಿಗೆ ಬಂದಿದ್ದರು. ಮನೆಯನ್ನು ಅರಸುತ್ತಾ ಬಿಹಾರದಿಂದ ಹೊರಟಾತ ಬಂದು ಸೇರಿದ್ದು ಮಂಗಳೂರಿಗೆ!!.....

ಇದೇ 2019 ರ ಜುಲಾಯಿ 11. ಮಂಗಳೂರು ನಗರದಲ್ಲಿ ತೀರಾ ಬಳಲಿರುವ ಕೃಶಕಾಯನಾದ ಹುಚ್ಚನೋರ್ವ ತಿರುಗಾಡುತ್ತಿರುವ ಮಾಹಿತಿಯರಿತು ಜೋಸೆಫ್ ಕ್ರಾಸ್ತಾ ನೇತೃತ್ವದ ಮಂಜೇಶ್ವರ ಸ್ನೇಹಾಲಯ ಕಾರ್ಯಕರ್ತರು ತೆರಳುತ್ತಾರೆ. ನಗರದ ಕದ್ರಿಯ ಬೀದಿಯಲ್ಲಿ ಆತ ಬಿದ್ದುಕೊಂಡಿದ್ದ. ದೇಹ ಸಂಪೂರ್ಣ ಸೊರಗಿತ್ತು. ಉಟ್ಟ ಉಡುಗೆಯು ಇನ್ನಿಲ್ಲದಂತೆ ಕೊಳಕುಗಳನ್ನೆಲ್ಲ ಮೆತ್ತಿಸಿಕೊಂಡಿತ್ತು. ಯಾರಿಗೂ ಬೇಡವಾಗಿ ಜೀವನ್ಮರಣ ಸ್ಥಿತಿಯಲ್ಲಿ ಒದ್ದಾಡುತ್ತಿದ್ದ ಆ ಮನುಷ್ಯ ದೇಹವನ್ನು ಬಿಗಿದಪ್ಪಿದ ಜೋಸೆಫ್ ಕ್ರಾಸ್ತಾರು ಬಳಿಯ ಉಪಹಾರ ಮಂದಿರದಿಂದ ಆತನಿಗೆ ಆಹಾರ ಪೊಟ್ಟಣ ತರಿಸಿ ಕೊಟ್ಟರು. ಊಟ ಮಾಡಿ ನೀರು ಕುಡಿದಾಗ ಸದ್ಯಕ್ಕೆ ಬಳಲಿಕೆ ಅಲ್ಪ ಕಡಿಮೆಯಾಗಿತ್ತು. ವಾಹನದಲ್ಲಿ ಕುಳ್ಳಿರಿಸಿ ಸ್ನೇಹಾಲಯಕ್ಕೆ, ಒಂದು ದಿನದ ವಿಶ್ರಾಂತಿಯ ಬಳಿಕ ಆತನನ್ನು ನೇರ ಯೇನಪೋಯ ಆಸ್ಪತ್ರೆಗೆ ಕರೆದೊಯ್ದು ಮಾನಸಿಕ ರೋಗ ವಿಭಾಗದಲ್ಲಿ ದಾಖಲಿಸಲಾಯಿತು.

 

 

 

ಮೂರು ವಾರಗಳ ಚಿಕಿತ್ಸೆ...... ಈಗ ಆತ ಶಾರೀರಿಕ, ಮಾನಸಿಕವಾಗಿ ಬಹಳಷ್ಟು ಸುಧಾರಿಸಿದ್ದ. ಮರಳಿ ಕರೆತಂದು ಎಲ್ಲರ ಜೊತೆಗೆ ಆತನನ್ನೂ ಅಕ್ಕರೆಯಿಂದ ಪೋಷಿಸಲಾಯಿತು. ಆಟೋಟ, ಯೋಗ, ಆಪ್ತ ಸಮಾಲೋಚನೆಯ ಫಲವಾಗಿ ಪ್ರೀತಿಯ ವಾತಾವರಣದಲ್ಲಿ ಆತ ಲಗುಬಗನೆ ಸಹಜತೆಗೆ ಬಂದಿದ್ದ. ಆತನ ಹೆಸರು ಕಾಳು, 50 ವರ್ಷ ವಯಸ್ಸು. ಬಿಹಾರ ರಾಜ್ಯದ ನಾವಡ ಜಿಲ್ಲೆ ಮರವಾ ತಾಲೂಕು ನಿವಾಸಿ. ಇಷ್ಟೊಂದು ಮಾಹಿತಿ ದೊರೆತದ್ದೇ ತಡ, ಸ್ನೇಹಾಲಯವು ಮುಂಬಯಿಯ ಶ್ರದ್ಧಾ ಪುನಶ್ಚೇತನ ಕೇಂದ್ರವನ್ನು ಸಂಪಕರ್ಿಸುತ್ತದೆ. ಆ ಫಲವಾಗಿ ಶ್ರದ್ಧಾ ಕಾರ್ಯಕರ್ತರ ಮೂಲಕ ಕಳೆದ ವಾರ ಕಾಳು ಅವರನ್ನು ಸುರಕ್ಷಿತವಾಗಿ ಮನೆಗೆ ಸೇರಿಸಲಾಗುತ್ತದೆ..... ಒಂದು ವರ್ಷದಿಂದಲೂ ಕಾಳುವಿಗಾಗಿ ಹುಡುಕಾಟದಲ್ಲಿದ್ದ ಪತ್ನಿ, ಮಕ್ಕಳ ಆನಂದಕ್ಕೆ ಪಾರಮ್ಯವೇ ಇರಲಿಲ್ಲ.

ಕಡುಬಡ ಕುಟುಂಬದ ಏಕಾಸರೆಯಾಗಿದ್ದ ಕಾಳು ಅವರು ಪತ್ನಿ ಹಾಗೂ ಒಂಭತ್ತು ಮಂದಿ ಮಕ್ಕಳನ್ನು ಹೊಂದಿದ್ದಾರೆ. ಈ ಪೈಕಿ ನಾಲ್ವರು ಹೆಣ್ಮಕ್ಕಳು. ದಿನಕೂಲಿಗೆ ದುಡಿದು ಕಾಳು ಹಾಗೂ ಪತ್ನಿಯು ಮಕ್ಕಳನ್ನು ಬೆಳೆಸುತ್ತಿದ್ದರು. ಅಷ್ಟರಲ್ಲಿ ಯಾರೋ ಸಂಬಂಧಿಕರು ಕಾಳು ಅವರನ್ನು ಕಟ್ಟಡ ನಿಮರ್ಾಣ ಕಾಮಗಾರಿಗೆ ಅಧಿಕ ವೇತನ ನೀಡುವ ಭರವಸೆಯೊಂದಿಗೆ ಸ್ವಲ್ಪ ದೂರದ ಊರಿಗೆ ಕರೆದೊಯ್ದಿದ್ದರು. ಒಂದು ತಿಂಗಳ ಕೆಲಸ ಮುಗಿಸಿ ಕೈ ತುಂಬಾ ಹಣ ಹಾಗೂ ಚೀಲ ತುಂಬಾ ಸಾಮಗ್ರಿ ಹೊತ್ತು ಬರುತ್ತಿದ್ದಾಗ ಈ ರಾದ್ದಾಂತ ಸಂಭವಿಸಿತ್ತು. ಆದರೆ..... ಈಗ ಅದೆಲ್ಲ ಹಳೆಯ ಕಥೆ..... ಕಾಳು ಸಹಜ ಬದುಕಿಗೆ ಮರಳಿದ್ದಾರೆ...... "ಹೇಗೆ ತೀರಿಸಲಿ ಸ್ನೇಹದ ಮನೆಯ ಋಣವ"..... ಎಂಬ ಆ ಮಾತಿನಲ್ಲಿ ಕೃತಜ್ಞತಾಭಾವ ತುಂಬಿ ತುಳುಕಿದೆ.


 

Kaalu, father of nine now fine back with family

Mr. Kaalu was found at Kadri, Mangaluru in a depressed condition. The Snehalaya team brought him to Snehalaya, treated him and provided basic comforts. He was a quick responder to the treatment and happy to share his details.

He hails from Marawa Taluk in the Nawada district of Bihar, married and having 9 children among them 5 sons and 4 daughters. He remembered all names and recalled his memory. Then he was shifted to Shraddha Rehabilitation foundation Mumbai, for further rehabilitation process. Mr. Kaalu was reunited with his family after a gap of 1 year. There were no bounds for the joy of his children when they received him back.

Comments powered by CComment

Home | About | NewsSitemapTerms and Conditions / Refund Policy | Contact

Copyright ©2014 www.snehalayamangalore.com.
Powered by eCreators

Contact Us :

Snehalaya Charitable Trust (R)

Head Office :

Door No. 15 - 21 / 1307 / 2,
Mascarenhas Compound,
2nd Cross Lower Bendoor,
Near Colaco Hospital, Kankanady Post,
Mangalore - 575 002

Operational Office:

D.No.: IV - 239 / H,
Bachalike, Pavoor Post,
Manjeshwar,
Kasargod District,
Kerala - 671 323

 

 

Tel. Ph.: (Land & Fax)
04998 - 273322
Mob.: 09446547033, 9036451931
Email: [email protected]