ಊರೂರು ಅಲೆದು ರಸ್ತೆ ಬದಿಯನ್ನೇ ಮನೆ ಮಾಡಿಕೊಂಡು, ಕಸದ ತೊಟ್ಟಿಯನ್ನೇ ಅನ್ನದ ಬಟ್ಟಲನ್ನಾಗಿಸಿದ ..... ಇನ್ನಾತ ಅನ್ನಕ್ಕಾಗಿ ಕೈ ಚಾಚಬೇಕಿಲ್ಲ, ಕೊಳೆತ ವಸ್ತ್ರ ತೊಡಬೇಕಾಗಿಲ್ಲ, ಬಿಸಿಲು, ಮಳೆಗೆ ಮೈಯ್ಯೊಡ್ಡಿ ಗುರಿ ಕಾಣದ ಪಯಣ ನಡೆಸಬೇಕಾಗಿಲ್ಲ, ಚಳಿಗೆ ರಾತ್ರಿ ಕಳೆಯಬೇಕಾಗಿಲ್ಲ, ಒಟ್ಟಿನಲ್ಲಿ ನರಕ ಸದೃಶ ಬದುಕು ಸವೆಸಬೇಕಾಗಿಲ್ಲ. ಸ್ನೇಹದ ಮನೆಯಲ್ಲಿ ನಾಲ್ಕು ಹೊತ್ತು ಉಂಡು ನೆಮ್ಮದಿಯಿಂದ ನಿದ್ರಿಸಬಹುದು.... ಸೂಕ್ತವಾದ ಚಿಕಿತ್ಸೆಯಿಂದ ಶೀಘ್ರದಲ್ಲೇ ಮನೋವಿಭ್ರಾಂತಿ ತೊಲಗಿ ಸಹಜ, ಸುಂದರ ಬದುಕನ್ನು ಮುನ್ನಡೆಸಬಹುದು.

ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಜೇಶ್ವರ ಆಸುಪಾಸಿನಲ್ಲಿ ಉದ್ದಕ್ಕೂ ಅಡ್ಡಕ್ಕೂ ನಡೆಯುತ್ತಿದ್ದ ಮತಿವಿಕಲನಾದ ಸುಮಾರು 25 ರ ಹರೆಯದ ಯುವಕನನ್ನು ಗಮನಿಸಿದ ಸ್ಥಳೀಯ ಸಾಮಾಜಿಕ ಬದ್ದತೆಯುಳ್ಳ ಯುವಕರು ಆತನನ್ನು ಕಳೆದ ದಿನ ಹಿಡಿದು ಮಂಜೇಶ್ವರದ ಸ್ನೇಹಾಲಯ ಮಾನಸಿಕ ಅಸ್ವಸ್ಥರ ಕೇಂದ್ರಕ್ಕೆ ತಲುಪಿಸಿದ್ದಾರೆ. ಕೇಂದ್ರದ ಮುಖ್ಯಸ್ಥ ಜೋಸೆಫ್ ಕ್ರಾಸ್ತಾ ಅವರ ನೇತೃತ್ವದಲ್ಲಿ ಆತನನ್ನು ಪ್ರೀತಿಯಿಂದಲೇ ಸ್ವೀಕರಿಸಲಾಯಿತು. ಆತ ತಮಿಳು ಭಾಷಿಕನಾಗಿದ್ದಾನೆ. ತುಂಬಾ ಮಾತನಾಡುತ್ತಿದ್ದ. ಆದರೆ, ಅವನ ಮಾತುಗಳು ಒಂದಕ್ಕೊಂದು ತಾಳೆಯಾಗುತ್ತಿರಲಿಲ್ಲ. ತನ್ನವರನ್ನು, ಊರನ್ನು ಗುರುತಿಸಲು ಆತ ಅಸಮರ್ಥನಾಗಿದ್ದಾನೆ. ಆದರೆ, ತನ್ನ ಹೆಸರು ವಿಜಯ್ ರಂಗ ಎಂದು ಪದೇಪದೇ ಹೇಳುತ್ತಿದ್ದಾನೆ. ಆತ ಮನೆ ಬಿಟ್ಟು ತಿಂಗಳುಗಳೇ ಕಳೆದಿರಬಹುದೆಂದು ಏಕ ನೋಟದಲ್ಲೇ ಸ್ಪಷ್ಟವಾಗುತ್ತದೆ.. ದೇಹ ಬಳಲಿತ್ತು. ಇದರಿಂದಲೇ ಆತನನ್ನು ಒಂದು ದಿನ ವಿಶ್ರಾಂತಿಗೆ ಬಿಡಲಾಗಿ, ಇದೀಗ ಮಂಗಳೂರಿನ ಯೇನಪೋಯ ಆಸ್ಪತ್ರೆಯ ಮಾನಸಿಕ ರೋಗ ವಿಭಾಗದಲ್ಲಿ ದಾಖಲಿಸಲಾಗಿದೆ. ಗುಣಮುಖನಾಗುವ ವರೆಗೆ ಆಸ್ಪತ್ರೆಯಲ್ಲೇ ದಾಖಲಿಸಿ ಸೂಕ್ತ ಚಿಕಿತ್ಸೆ ನೀಡಿ ಬಳಿಕ ಸಂಬಂಧಿಕರು ತಲುಪಿ ಸ್ವೀಕರಿಸುವ ವರೆಗೆ ಆತನಿಗೆ ಸ್ನೇಹಾಲಯದಲ್ಲಿ ವಸತಿ ಕಲ್ಪಿಸುವುದಾಗಿ ಕೇಂದ್ರದ ಮುಖ್ಯಸ್ಥ ಜೋಸೆಫ್ ಕ್ರಾಸ್ತಾ ಹೇಳಿದ್ದಾರೆ....... ಅಂತೂ ವಿಜಯ್ ರಂಗ ಮರಣ ದವಡೆಯಿಂದ ಮರಳಿ ಬದುಕನ್ನೇರಿದ್ದಾನೆ.

 

 


New family member to Snehalaya- Mr. Vijay Ranga.

This young man who wandered around the streets several years not knowing where he is, what he is doing without knowing his past, his present or future he just was breathing to live.

He wandered wherever his foot took him, dustbins were his bowl to eat, stinky thrown away food stuff was his bread for survival. Open sky was his roof both in heavy rains, hot summer and cold winter. He had no clothing on him or felt the need for it. Garbage was the most important place of happiness to him.

Now, the young man is fallen in the safe hands at Snehalaya. He feels suddenly that his life is changing. A smile has taken important position on his face.

He doesn't extend his hands for his hunger. Has great love for dressing, started loving his life, and living his life joyfully.

He is resting comfortably with several other brothers around.

Thus 25-years-young man was roaming in the street of Manjeshwar for days together. The public of Manjeshwar contacted Joseph Crasta and brought this young man to Snehalaya.

The founder of Snehalaya - Joseph Crasta warmly received him. He is conversant in Tamil and speaks restlessly but doesn't connect things. His events, incidents do not match.
He is unable to recalk his whereabouts and identity. himself and his hometown. But sure of his name as Vijay Ranga. He might have left his home long back. He is completely exhausted. He has been taken for medical treatment and rest to Yenepoya hospital.

He will be accommodated at Snehalaya till his people are identified snehalaya shall go all way out to rehabilitate him said Bro Joseph Crasta.Comments powered by CComment

Home | About | NewsSitemapTerms and Conditions / Refund Policy | Contact

Copyright ©2014 www.snehalayamangalore.com.
Powered by eCreators

Contact Us :

Snehalaya Charitable Trust (R)

Head Office :

Door No. 15 - 21 / 1307 / 2,
Mascarenhas Compound,
2nd Cross Lower Bendoor,
Near Colaco Hospital, Kankanady Post,
Mangalore - 575 002

Operational Office:

D.No.: IV - 239 / H,
Bachalike, Pavoor Post,
Manjeshwar,
Kasargod District,
Kerala - 671 323

 

 

Tel. Ph.: (Land & Fax)
04998 - 273322
Mob.: 09446547033, 9036451931
Email: [email protected]