Mr. Arjun, who was roamed across the street and was eating from the garbage, is now safe along with his mother.

A 28 years young man was roaming in Talapady near Kanvatheertha beach on 4th July 2019. The public informed Snehalaya. Joseph Crasta, The founder of Snehalaya reached Kanvatheertha and brought Mr. Arjun to Snehalaya. He was very tired. Brought to Snehalaya. Gave good bath and food. Next day he has been admitted to Yenepoya hospital for his treatment. After 15 days of treatment he recovered from illness. Brought to Snehalaya for further treatment. He started to participate in yoga, games and counseling. During counseling he shared his address that he is from Colliery in the Betul district of Madhya Pradesh.

We have forwarded the letter to his address. However, his mother was not in a position to come Snehalaya as it is far. Then we have contacted Shraddha Rehabilitation foundation, through Shraddha - finally he has reached home safely.

There was heavenly feel when the mother embraced her lost Son…. Their hug showered tears and silent words. They shared that they had no hopes on her son being alive, he was missing since one year..

Arjun, who had suffered from mental depression for past five years, was treated at a government hospital.
After a short recovery, he has gone to work for other place. There he stopped his medicines. By the God’s grace he safely reached Snehalaya. And with the help of Snehalaya he is reached his family.

 

 

 


ಅರ್ಜುನ್ ಮರಳಿ ಮನೆ ಸೇರಿದಾಗ.........

ಊರೂರು ಸುತ್ತಿ, ಹಾದಿಬೀದಿಯಲ್ಲಿ ಅಲೆದು ಕೊಳಚೆ ಡಬ್ಬಾದ ತ್ಯಾಜ್ಯವನ್ನೇ ಮೆಲ್ಲುತ್ತಾ ಚಿತ್ತಭ್ರಮೆಯಿಂದಲೇ ಭ್ರಮಿಸುತ್ತಿದ್ದ ಅಜರ್ುನ್ ಈಗ ಪೂರ್ಣ ಮತಿವಂತನಾಗಿ ಅಮ್ಮನ ಮಡಿಲು ಸೇರಿದ್ದಾನೆ........ "ಕೈ ತಪ್ಪಿ ಹೋದನೆಂದೇ ತಿಳಿದ ಮಗನನ್ನು ಮರಳಿ ಕೊಟ್ಟೆಯಲ್ಲಾ ದೇವಾ... ಕೋಟಿ ಪ್ರಣಾಮ" ಎಂದು ಗೊಳ್ಳನೆ ಅತ್ತು ಅಮ್ಮ ಆನಂದಭಾಷ್ಪ ಸುರಿಸಿದಾಗ ಆ ಮನೆಯಲ್ಲಿ ಸೇರಿದವರ ಕಣ್ಣಾಲಿಗಳೂ ಸಂತೋಷದಿಂದ ತೇವವಾದವು. ಹಾಗೆ, ಸ್ನೇಹಾಲಯದ ಸ್ನೇಹಮಯಿ ಸೇವೆಯ ಒಸರಿನಲ್ಲಿ ಮತ್ತೊಂದು ಪುಟ ಪೋಣಿಸಲ್ಪಟ್ಟಿತು.

ಅರ್ಜುನ್ , ಕೇವಲ 28 ರ ಯುವಕ...... 2019 ರ ಜುಲೈ ನಾಲ್ಕು. ಪೂರ್ಣ ಮತಿವಿಕಲನಾದ ಯುವಕ ತಲಪ್ಪಾಡಿ ಕಣ್ವತೀರ್ಥ ಕಡಲ ಕಿನಾರೆ ರಸ್ತೆಯಲ್ಲಿ ನಡೆಯುತ್ತಿರುವುದನ್ನು ಕಂಡ ಮಾನವಪ್ರೇಮಿಗಳು ಯಾರೋ ಬಳಿಯ ಮಂಜೇಶ್ವರದ ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನಶ್ಚೇತನ ಕೇಂದ್ರಕ್ಕೆ ಮಾಹಿತಿ ನೀಡಿದ್ದರು. ತಕ್ಷಣವೇ ಸ್ನೇಹಾಲಯ ಜೋಸೆಫ್ ಅವರು ತಮ್ಮ ವಾಹನದಲ್ಲಿ ಅತ್ತ ತೆರಳಿ ಯುವಕನನ್ನು ಕರೆ ತರುತ್ತಾರೆ. ಆತ ಸಂಪೂರ್ಣ ಸೊರಗಿ ಹೋಗಿದ್ದ. ಶರೀರ ಕೊಳಕಾಗಿ ಗಬ್ಬುನಾಥ ಬೀರುತ್ತಿತ್ತು. ಸಾಲದ್ದಕ್ಕೆ ಒಂದಷ್ಟು ಕಸ ತ್ಯಾಜ್ಯಗಳನ್ನು ಎರಡೂ ಕೈಗಳಲ್ಲಿ ಬಾಚಿ ಹಿಡಿದುಕೊಂಡಿದ್ದ. ತಂದಾಕ್ಷಣವೇ ಕಚ ಕೆರೆಸಿ ಸ್ನಾನ ಮಾಡಿಸಿ ಅನ್ನಾಹಾರ ನೀಡಿ ವಿಶ್ರಾಂತಿಗೆ ಬಿಡಲಾಯಿತು. ಮಾರನೇ ದಿನ ಮಂಗಳೂರು ಯೇನಪೋಯ ಆಸ್ಪತ್ರೆಯ ಮಾನಸಿಕ ರೋಗ ವಿಭಾಗದಲ್ಲಿ ದಾಖಲಿಸಲಾಗಿ 15 ದಿನಗಳ ದಾಖಲು ಚಿಕಿತ್ಸೆ ನೀಡಲಾಯಿತು. ಅಷ್ಟರಲ್ಲಿ ಆತ ನೈಜತೆಗೆ ಬಂದಿದ್ದ. ಮರಳಿ ಸ್ನೇಹಾಲಯಕ್ಕೆ ಕರೆತಂದು ಆತ್ಮೀಯ ಆರೈಕೆ ನೀಡಲಾಯಿತು. ಪ್ರೀತಿಯ ವಾತಾವರಣದಲ್ಲಿ ಆತ ಎಲ್ಲರ ಜೊತೆ ಕೂಡಿ ಬಾಳತೊಡಗಿದೆ. ಅಲ್ಲಿನ ದಿನಚರಿಗಳಲ್ಲಿ ಸಕ್ರಿಯವಾಗುತ್ತಿದ್ದ. ಆಪ್ತ ಸಮಾಲೋಚನೆಯಲ್ಲಿ ತನ್ನನ್ನು ನೆನಪಿಸತೊಡಗಿದ.

ತನ್ನ ಹೆಸರು ಅರ್ಜುನ್ ಎಂದೂ ಮಧ್ಯಪ್ರದೇಶದ ಬೇತುಲ್ ಜಿಲ್ಲೆಯ ಕೊಲ್ಯಾರಿ ನಿವಾಸಿಯೆಂದೂ ಹೇಳಿದ್ದ. ಆತ ತಿಳಿಸಿದ ವಿಳಾಸಕ್ಕೆ ಸ್ನೇಹಾಲಯದ ಪತ್ರ ರವಾನೆಯಾಯಿತು. ಆದರೆ, ಮಗನನ್ನು ಕರೆದೊಯ್ಯಲು ಇಷ್ಟೊಂದು ದೂರ ಬರುವ ಸ್ಥಿತಿಯಲ್ಲಿ ಆತನ ಅಮ್ಮನಿರಲಿಲ್ಲ. ಹಾಗೆ, ಸ್ನೇಹಾಲಯವು ಮುಂಬಯಿಯ ಶ್ರದ್ಧಾ ಪುನರ್ವಸತಿ ಕೇಂದ್ರದ ನೆರವನ್ನು ಯಾಚಿಸುತ್ತದೆ. ಶ್ರದ್ಧಾಕ್ಕೆ ತಲುಪಿಸಿದ ಅರ್ಜುನ್ ನ್ನು ಕಳೆದ ವಾರ ಅಲ್ಲಿನ ಕಾರ್ಯಕರ್ತರು ಮನೆಗೆ ಸೇರಿಸುತ್ತಾರೆ. ಒಂದು ವರ್ಷದಿಂದ ಕಾಣೆಯಾಗಿದ್ದ ಕುವರ ಜೀವಂತವಾಗಿ, ಶಾರೀರಿಕ, ಮಾನಸಿಕ ವಿಕಾಸ ಹೊಂದಿ ಮರಳಿದ್ದನ್ನು ಕಂಡ ಅಮ್ಮನ ಆನಂದಕ್ಕೆ ಪಾರಮ್ಯವೇ ಇರಲಿಲ್ಲ.

ಐದು ವರ್ಷಗಳಿಂದ ಮಾನಸಿಕ ಖಿನ್ನತೆ ಬಾಧಿಸಿದ್ದ ಅರ್ಜುನ್ ನ್ಗೆ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತಂತೆ. ಅಲ್ಪ ವಾಸಿಯಾದಾಗ ಮನೆಯಿಂದ ಅನ್ಯ ಊರಿಗೆ ಕೆಲಸಕ್ಕೆಂದು ತೆರಳಿದಾತ ಔಷಧಿ ಸೇವನೆ ಬಿಟ್ಟಿದ್ದ. ಮತ್ತೆ ರೋಗ ಉಲ್ಭಣಿಸಿ ಯಾರಿಗೂ ಗೊತ್ತಿಲ್ಲದೆ ಎತ್ತಲೋ ನಡೆದೇ ಬಿಟ್ಟಿದ್ದ. ಆದರೆ..... ದೇವಕೃಪೆ ಎಂಬಂತೆ ಇತ್ತ ಮಂಜೇಶ್ವರದ ಸನಿಹ ಬಂದು ಸೇರಿರುವುದರಿಂದ ಆ ಯುವಕ ಇಂದು ಮರುಜನ್ಮ ಹೊಂದುವಂತಾಗಿದ್ದಾನೆ..............

 

 

Comments powered by CComment

Home | About | NewsSitemapTerms and Conditions / Refund Policy | Contact

Copyright ©2014 www.snehalayamangalore.com.
Powered by eCreators

Contact Us :

Snehalaya Charitable Trust (R)

Head Office :

Door No. 15 - 21 / 1307 / 2,
Mascarenhas Compound,
2nd Cross Lower Bendoor,
Near Colaco Hospital, Kankanady Post,
Mangalore - 575 002

Operational Office:

D.No.: IV - 239 / H,
Bachalike, Pavoor Post,
Manjeshwar,
Kasargod District,
Kerala - 671 323

 

 

Tel. Ph.: (Land & Fax)
04998 - 273322
Mob.: 09446547033, 9036451931
Email: [email protected]