Jan 10, 2019 : Destiny strikes too hard sometimes. For multiple people of same family at very rare occasions. The tale if this mother and son is no exceptions.

Her name is Lakshmi, 68 years old was living in a ruined house near Hosangadi Check Post on the boarder of Karnataka and Kerala state along with her 43 years son Chandrashekar for the past two-and-a-half years.
She had lost her vision of both eyes partially and was above 80% blind.

Chandrashekar, has been suffering from anemia for over two years, and extremely dehydrated while rescuing.

They were begging for food. Both the son and the mother were addicted to alcohol.
Out of desperation they were disturbing the public and becoming a threat behaving very violent sometimes.

At Mid night they were found walking on the highways with rags & dirty clothes. Many times they were hit by speeding vehicles. They were rescued from accidents and very awkward situations.Their life was in danger and they were a public nuisance.This was their daily life.

This scenes were observed by Mr Harshad varkady, Chairman District Panchayath Standing committee Kasaragod. He, telephoned to Joseph Crasta for providing a remedy to this problem..

Joseph Crasta visited the spot with his team taking the help of Manjeshwar police Authorities. The mother and son were brought to Snehalaya with the help of police. The two were taken to the hospital the for their first aid treatment and preliminary check up. Joseph Crasta said this is a challenging case study to rescue, treat, care and rehabilitate this mother and son. Snehalaya is absolutely confident to provide them a better place to live and re-unite safely to their respective houses.

It is learnt that Lakshmi and Chandrashekar are natives of Bellary, Karnataka. Chandrashekar is married and has a wife and children. They lived in a small house near Bellary bus station. Chandrashekar, a mason by profession, came to Manjeshwar two and a half years ago searching for job.

Meantime he fell in sick. No medical help gave him any comforts. The Wenlock Hospital diagnosed him with hyper Anemia . He was also attacked by epilepsy. By hearing the health condition of her son Lakshmi rushed to Manjeswar from her hometown and started to live here. Since then it is about two years.

Everything is coming to a happy ending because of the timely care and treatment provided by Snehalaya.
Both mother and son are away from the death knocks, living a happy life.


ಸ್ನೇಹಾಲಯದ ದೈವಿಕ ಸ್ಪಂದನೆ.... ಮರಣಮುಖೀ ಬದುಕಿನಿಂದ ಮಾತೆ, ಮಗನ ರಕ್ಷಣೆ

ಸ್ನೇಹಾಲಯದ ದೈವಿಕ ಸ್ಪಂದನೆಯಿಂದ ಸಮಾಜಮುಖಿ ನಾಗರಿಕ ಬಂಧುಗಳ ಕರುಣೆಯಿಂದ ಆ ಅಮ್ಮ, ಮಗನ ದೀನ ಬಾಳು ಹಸನುಗೊಂಡಿದೆ.

ಇವರು ಲಕ್ಷ್ಮಿ ಅಮ್ಮ, 68 ರ ಹರೆಯ. 43 ವರ್ಷದ ಪುತ್ರ ಚಂದ್ರಶೇಖರನ ಜೊತೆಗೆ ಮಂಜೇಶ್ವರದ ಹೊಸಂಗಡಿ ಚೆಕ್ ಪೋಸ್ಟ್ ಸಮೀಪ ರಾ. ಹೆದ್ದಾರಿ ಬದಿಯಲ್ಲಿ ಪಾಳು ಬಿದ್ದ ಜೋಪಡಿಯಲ್ಲಿ ಕಳೆದ ಎರಡೂವರೆ ವರ್ಷಗಳಿಂದ ನರಕ ಸದೃಶ ಬದುಕು ಸಾಗಿಸುತ್ತಿದ್ದರು. ಆ ಅಮ್ಮನಿಗೆ ಎರಡೂ ಕಣ್ಣುಗಳಿಗೆ ಅಂಧತ್ವ ಬಾಧಿಸಿದೆ. ಎರಡು ವರ್ಷಗಳಿಂದ ರಕ್ತ ಹೀನತೆ ಕಾಯಿಲೆಯಿಂದ ತೀರಾ ನೀಶ್ಯಕ್ತನಾಗಿರುವ ಚಂದ್ರಶೇಖರ ನಿತ್ರಾಣದಿಂದಾಗಿ ದುಡಿಯಲಾರದೆ ಕಂಗಾಲಾಗಿದ್ದಾರೆ. ಸಾಲದ್ದಕ್ಕೆ ಅಪಸ್ಮಾರ ರೋಗದ ಕಾಟ ಬೇರೆ. 

ಕಂಡಕಂಡವರತ್ತ ಕೈಚಾಚಿ ಭಿಕ್ಷೆ ಬೇಡಿ ಅವರು ಹೊಟ್ಟೆ ಹೊರೆಯುತ್ತಿದ್ದರು. ಆದರೆ, ಜೊತೆಗೆ ಆ ಅಮ್ಮ, ಮಗ ಕುಡಿತದ ಚಟವನ್ನು ಮೈಗೂಡಿಸಿಕೊಂಡಿದ್ದರು. ಸಿಕ್ಕ ಚೂರು ಕಾಸಿನಿಂದ ಸ್ವಲ್ಪ ತಿಂದು, ಸಾಕಷ್ಟು ಕುಡಿದು ತೂರಾಡುತ್ತಿದ್ದರು. ಕುಡಿದಮಲಿನಲ್ಲಿ ಅವರ ದಾಂಧಲೆ ನಾಗರಿಕರಿಗೆ ಕೀಟಲೆಯಾಗುತ್ತಿತ್ತು. ಕೆಲವೊಮ್ಮೆ ಹಿಂಸಾ ಪ್ರವೃತ್ತಿಯನ್ನೂ ಮಾಡುತ್ತಿದ್ದರು. ಪಾನಮತ್ತರಾಗಿ ಜೋಪಡಿಯಿಂದ ಹೊರಬಂದು ರಸ್ತೆ ಬದಿಯಲ್ಲೇ ಹೊರಳಾಡುವ ಜಾಯಮಾನ.... ಇದರಿಂದಾಗಿ ಹಲವು ಬಾರಿ ವಾಹನ ಅಪಘಾತಕ್ಕೆ ತುತ್ತಾಗಿ ಗಾಯಗೊಂಡಿದ್ದರು. ಕೊಳಕು ಬಟ್ಟೆಯಲ್ಲಿ ನೋಡುಗರಿಗೆ ಹೇಸಿಗೆ ಹುಟ್ಟಿಸಿ ಭಿಕಾರಿ ಬದುಕನ್ನೇ ಮುಂದುವರಿಸಿದ್ದರು. ಹಾಗೆ ಸಾಗುತ್ತಿತ್ತು ಅವರ ದೀನ ಬಾಳು.

ಈ ಅವಸ್ಥೆಯನ್ನು ಗಮನಿಸಿದ ಕಾಸರಗೋಡು ಜಿಲ್ಲಾ ಪಂಚಾಯತು ಸ್ಥಾಯೀ ಸಮಿತಿ ಅಧ್ಯಕ್ಷರಾಗಿರುವ ಹಷರ್ಾದ್ ವಕರ್ಾಡಿ ಅವರು ಮಂಜೇಶ್ವರ ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನಶ್ಚೇತನ ಕೇಂದ್ರದ ಮುಖ್ಯಸ್ಥ ಜೋಸೆಫ್ ಕ್ರಾಸ್ತಾ ಅವರಿಗೆ ಕಳೆದ ವಾರ ದೂರವಾಣಿ ಮಾಹಿತಿ ನೀಡಿ ನೆರವು ಯಾಚಿಸುತ್ತಾರೆ. ಸುದ್ದಿಯರಿತದ್ದೇ ತಡ, ಜೋಸೆಫ್ ಕ್ರಾಸ್ತಾ ಅವರು ತನ್ನ ಸಂಗಡಿಗರ ಜೊತೆಗೆ ಸ್ಥಳಕ್ಕೆ ಭೇಟಿಯಿರಿಸಿದ್ದಲ್ಲದೆ ಮಂಜೇಶ್ವರ ಪೊಲೀಸರ ನೆರವನ್ನು ಕೋರಿದ್ದರು. ಠಾಣಾಧಿಕಾರಿ ನೇತೃತ್ವದಲ್ಲಿ ಧಾವಿಸಿದ ಪೊಲೀಸು ಸಿಬ್ಬಂದಿಗಳ ಸಹಕಾರದೊಂದಿಗೆ ಆ ಅಮ್ಮ, ಮಗನನ್ನು ಸ್ನೇಹದ ಮನೆಗೆ ಸಾಗಿಸಲಾಯಿತು. ಅಲ್ಲಿ ಪ್ರಾಥಮಿಕ ಆರೈಕೆಯಿತ್ತು ದಿನದ ವಿಶ್ರಾಂತಿಗೆ ಬಿಟ್ಟು ಮಾರನೇ ದಿನವೇ ಇಬ್ಬರನ್ನೂ ಆಸ್ಪತ್ರೆಗೆ ಸೇರಿಸಲಾಗಿದೆ. ಅಮ್ಮನ ಕಣ್ಣಿನ ಶುಶ್ರೂಷೆ ಹಾಗೂ ಪುತ್ರನ ರೋಗ ಶುಶ್ರೂಷೆಯನ್ನು ಯಥಾವಿಧಿ ಪೂರೈಸಬೇಕು. ಬಳಿಕ ಇವರ ದುಶ್ಚಟವನ್ನು ಬಿಡಿಸಬೇಕು. ಸೂಕ್ತ ಆಶ್ರಯ, ಆರೈಕೆಯೊದಗಿಸಿ ಎಲ್ಲವೂ ಪೂರ್ಣ ಗುಣ ಮುಖರಾದ ಬಳಿಕ ಇಬ್ಬರನ್ನೂ ಸುರಕ್ಷಿತವಾಗಿ ಊರಿಗೆ ತಲುಪಿಸುವುದಾಗಿ ಜೋಸೆಫ್ ಕ್ರಾಸ್ತಾ ತಿಳಿಸಿದ್ದಾರೆ.

ಲಕ್ಷ್ಮಿ ಅಮ್ಮ ಹಾಗೂ ಚಂದ್ರಶೇಖರ ಅವರು ಮೂಲತ: ಕನರ್ಾಟಕ ಬಳ್ಳಾರಿ ನಿವಾಸಿಗಳು. ಚಂದ್ರಶೇಖರ ವಿವಾಹಿತರಾಗಿ ಪತ್ನಿ, ಮಕ್ಕಳನ್ನು ಹೊಂದಿದ್ದಾರೆ. ಬಳ್ಳಾರಿ ಬಸ್ಸು ನಿಲ್ದಾಣ ಬಳಿಯಲ್ಲೇ ಪುಟ್ಟ ಮನೆ ಮಾಡಿಕೊಂಡು ಸಪತ್ನೀಕರಾಗಿ ವಾಸವಿದ್ದರು. ಗಾರೆ ಕೆಲಸ ಕಾಮರ್ಿಕನಾಗಿರುವ ಚಂದ್ರಶೇಖರ ಅವರು ಕೆಲಸ ನಿಮಿತ್ತ ಎರಡೂವರೆ ವರ್ಷ ಹಿಂದೆ ಮಂಜೇಶ್ವರಕ್ಕೆ ಬಂದಿದ್ದರಂತೆ. ಆದರೆ, ದಿಢೀರನೆ ನಿತ್ರಾಣ ತಲೆದೋರಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಪರೀಕ್ಷೆ ನಡೆಸಿದಾಗ ರಕ್ತಹೀನತೆ ರೋಗ ಕಂಡುಬಂದಿತ್ತು. ಜೊತೆಗೆ ಅಪಸ್ಮಾರ ಕಾಯಿಲೆಯೂ ಬಡಿದಿತ್ತು. ಮಗನ ಸ್ಥಿತಿಯರಿತು ಊರಿನಿಂದ ಬಂದಿದ್ದ ಅಮ್ಮನು ಎರಡು ವರ್ಷದಿಂದ ಪುತ್ರನೊಂದಿಗೆ ಇಲ್ಲೇ ಬೀಡು ಬಿಡುವಂತಾಗಿತ್ತು..... ಸ್ನೇಹಾಲಯದ ಅಭಯ ಹಸ್ತದಿಂದಾಗಿ ಸದ್ಯ ಎಲ್ಲವೂ ಸುಖಾಂತ್ಯಕ್ಕೆ ಬಂದಿದೆ....

Comments powered by CComment

Home | About | NewsSitemapTerms and Conditions / Refund Policy | Contact

Copyright ©2014 www.snehalayamangalore.com.
Powered by eCreators

Contact Us :

Snehalaya Charitable Trust (R)

Head Office :

Door No. 15 - 21 / 1307 / 2,
Mascarenhas Compound,
2nd Cross Lower Bendoor,
Near Colaco Hospital, Kankanady Post,
Mangalore - 575 002

Operational Office:

D.No.: IV - 239 / H,
Bachalike, Pavoor Post,
Manjeshwar,
Kasargod District,
Kerala - 671 323

 

 

Tel. Ph.: (Land & Fax)
04998 - 273322
Mob.: 09446547033, 9036451931
Email: [email protected]