He walked for no reason miles together. Bridge was the bed to sleep. Open sky was his roof both in heavy rain, hot summer and cold winter. But finally he reached a home that brought smile on his face.

He is Mithun. Sometimes he says his name is Raja and sometimes says Mithun. About 40 years old. He is often says he is a resident of Assam. His language, too, seems to be a native of North India.

Kukke Subramanya - Kumaradhara River Bridge is the home for the past three months. He wore jacket and inside the jacket many shirts and moving around.
He was eating food, which provides by the nearby hotel people. His behavior frightened the pilgrims. Sometimes the pilgrims are aggressively beaten also. He was sleeping on the bridge. Thus, it was disgusting to the citizens.

A local press reporter telephoned Brother Joseph Crasta and discussed the matter. The Snehalaya team went to Subramanya brought Mr. Raja / Mithun to Snehalaya home.

He was a handsome young man when he was bearded. Then gave preliminary care. Next day he has been admitted to the Hospital for his psychiatric treatment at Mangalore. Joseph Crasta said upon discharge he will be accommodated at Snehalaya till his people are identified.

 

 

 


ದಿಕ್ಕು ದೆಸೆಯಿಲ್ಲದೆ ತಿರುಗುತ್ತಿದ್ದ ಯುವಕನಿಗೆ ನವಭಾವ, ನವಜೀವ, ನವಶಕ್ತಿ ತುಂಬಿದ ಸ್ನೇಹಮನೆ

ದಿಕ್ಕು ದೆಸೆಯಿಲ್ಲದೆ ನಡೆದಾಡುತ್ತಿದ್ದ ಮಾನಸಿಕ ಅಸ್ವಸ್ಥನ ಬಾಳಲ್ಲಿ ಹೊಸ ಬೆಳಕು.....

ಆತ ರಾಜ ಯಾನೆ ಮಿಥುನ್. ಕೆಲವೊಮ್ಮೆ ತನ್ನ ಹೆಸರು ರಾಜ ಎಂದೂ ಕೆಲವೊಮ್ಮೆ ಮಿಥುನ್ ಎಂದೂ ಹೇಳುತ್ತಾನೆ. ಸುಮಾರು 40 ರ ಹರೆಯ. ಅಸ್ಪಷ್ಟ ಹಿಂದಿಯಲ್ಲಿ ವಿರಳ ಮಾತುಗಾರಿಕೆ. ತಾನು ಅಸ್ಸಾಂ ನಿವಾಸಿಯೆಂದು ಆಗಾಗ್ಗೆ ಹೇಳುವುದಿದ್ದರೂ ಅದೂ ಖಾತ್ರಿಯಿಲ್ಲ. ಅಂತೂ ಆತನ ಭಾಷೆ, ಮುಖ ಕಂಡರೆ ಉತ್ತರ ಭಾರತದವನೇ ಇರಬೇಕು ಅನ್ನಿಸುತ್ತದೆ.

ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಕುಮಾರಧಾರಾ ನದಿಯ ಸೇತುವೆ ಆಸುಪಾಸನ್ನೇ ಕಳೆದ ಮೂರು ತಿಂಗಳುಗಳಿಂದ ಮನೆ ಮಾಡಿಕೊಂಡಿದ್ದಾನೆ. ಜಾಕೆಟ್ ಒಂದನ್ನು ಹಾಕಿ ಅದರೊಳಗೆ ಅನೇಕ ಅಂಗಿಗಳನ್ನು ತುರುಕಿಕೊಂಡು ಆತ ಅಲ್ಲೇ ತಿರುಗಾಡುತ್ತಿದ್ದ. ಆಸುಪಾಸಿನ ಹೊಟೇಲಿನವರು ನೀಡುತ್ತಿದ್ದ ಆಹಾರ ಸೇವಿಸುತ್ತಿದ್ದ. ಆತನ ವರ್ತನೆಯು ಕ್ಷೇತ್ರ ಯಾತ್ರಿಕರಲ್ಲಿ ಭಯ ಹುಟ್ಟಿಸುತ್ತಿತ್ತು. ಕೆಲವೊಮ್ಮೆ ಯಾತ್ರಿಕರತ್ತ ಆಕ್ರಮಣಶೀಲನಾಗಿ ಅವರ ಒದೆ ತಿಂದದ್ದೂ ಉಂಟು. ಸೇತುವೆಯ ಮೇಲೆಯೇ ಮಲಗುತ್ತಿದ್ದ. ಹೀಗೆ, ನಾಗರಿಕರಿಗೆ ಅಸಹ್ಯ ಹುಟ್ಟಿಸುತ್ತಿದ್ದ ಆತನ ಬಗ್ಗೆ ಸ್ಥಳೀಯ ಪತ್ರಿಕಾ ವರದಿಗಾರರೊಬ್ಬರು ಮಂಜೇಶ್ವರ ಸ್ನೇಹಾಲಯದ ಮುಖ್ಯಸ್ಥ ಬ್ರದರ್ ಜೋಸೆಫ್ ಕ್ರಾಸ್ತಾರನ್ನು ದೂರವಾಣಿ ಮೂಲಕ ಸಂಪಕರ್ಿಸಿ ಮಾಹಿತಿ ನೀಡುತ್ತಾರೆ. ಸುಬ್ರಹ್ಮಣ್ಯಕ್ಕೆ ತೆರಳಿದ ಸ್ನೇಹಾಲಯ ತಂಡವು ಆ ಮಾನಸಿಕ ಅಸ್ವಸ್ಥನನ್ನು ಸ್ನೇಹದ ಮನೆಗೆ ಕರೆತಂದಿದೆ. ಉದ್ದನೆ ಬಿಟ್ಟಿದ್ದ ಗಡ್ಡ ಕೂದಲನ್ನು ಕೆರೆಸಿದಾಗಲೇ ಆತ ಸುಂದರ ಯುವಕನಾಗಿ ರೂಪುಗೊಂಡಿದ್ದ. ಪ್ರಾಥಮಿಕ ಉಪಚಾರ ನೀಡಿ ದಿನದ ವಿಶ್ರಾಂತಿಗೆ ಬಿಟ್ಟು ಇದೀಗ ಮಂಗಳೂರು ಯೇನಪೋಯ ಆಸ್ಪತ್ರೆಯ ಮಾನಸಿಕ ರೋಗ ವಿಭಾಗದಲ್ಲಿ ದಾಖಲಿಸಲಾಗಿದೆ. ವಾರಗಳ ದಾಖಲು ಚಿಕಿತ್ಸೆ ಬಳಿಕ ಸ್ನೇಹಾಲಯಕ್ಕೆ ಮರಳಿಸಿ ಆಸರೆಯಿತ್ತು ಆರೈಕೆ ಮುಂದುವರಿಸಲಾಗುವುದು. ಪೂರ್ಣ ಸಹಜತೆಗೆ ಬಂದಾಗ ಮನೆಯವರನ್ನು ಸಂಪಕರ್ಿಸಿ ಸುರಕ್ಷಿತವಾಗಿ ಊರಿಗೆ ಸೇರಿಸಲಾಗುವುದೆಂದು ಜೋಸೆಫ್ ಕ್ರಾಸ್ತಾ ತಿಳಿಸಿದ್ದಾರೆ.

ಹಾಗೆ ಸ್ನೇಹಾಲಯದ ತ್ಯಾಗಮಯಿ ಚಟುವಟಿಕೆಗಳಲ್ಲಿ ಮತ್ತೊಂದು ಪುಟ ಸೇರ್ಪಡೆಯಾಯಿತು.



Comments powered by CComment

Home | About | NewsSitemapTerms and Conditions / Refund Policy | Contact

Copyright ©2014 www.snehalayamangalore.com.
Powered by eCreators

Contact Us :

Snehalaya Charitable Trust (R)

Head Office :

Door No. 15 - 21 / 1307 / 2,
Mascarenhas Compound,
2nd Cross Lower Bendoor,
Near Colaco Hospital, Kankanady Post,
Mangalore - 575 002

Operational Office:

D.No.: IV - 239 / H,
Bachalike, Pavoor Post,
Manjeshwar,
Kasargod District,
Kerala - 671 323

 

 

Tel. Ph.: (Land & Fax)
04998 - 273322
Mob.: 09446547033, 9036451931
Email: [email protected]