He is 23-year-old Rakesh Chauhan, a resident of Prem Nagar in Patalgaon Taluk in Jaspur district of North India.

Last year 24th August 2019, the railway police have observed an unidentified youth walking at the Kankanady railway station in Mangalore for a couple of days and are being investigated.

Making contradictory statements, Police authority was sure that he is mentally ill. Then, the Police authority collected Bro. Joseph Crasta’s contact number and telephoned to Joseph Crasta for providing a remedy to this problem..Immediately the Snehalaya team reached Mangalore railway station and brought the young man to Snehalaya.

After 2 days he became calm, sober and responsive. He was admitted to hospital for further medical help. After the necessary treatment his conditions improved and he became very normal. Then brought to Snehalaya for his further continuation of medication.

At Snehalaya he started to work, help others and involve in all activities. Living here in togetherness he was able to come out from his illness and cured. He slowly recalled his memory and shared his details. As a result his people were identified.

One day Rakesh has gone to his relatives house and was returning home by train.Something suddenly happened, Rakesh had forgotten everything and unknowingly landed at Kankanady station ….Although the target is an unknown journey, but he arrived at the right place.

When we passed on the message, there were no bounds to his family members. He was shifted to Shraddha Rehabilitation Center Mumbai, and the volunteers reached Rakesh to his home. The comeback was accorded with joyful tears and hugs of each others.

However, there were no bounds to his mother when her son unexpectedly arrived five months later.

 

 

 


 

ದಿಢೀರ್ ಬಡಿದ ಚಿತ್ತವೈಕಲ್ಯ: ಮಂಗಳೂರಿನಲ್ಲಿಳಿದ ಛತ್ತೀಸ್ಗಡದ ರಾಕೇಶನಿಗೀಗ ಅದು ಕೆಟ್ಟ ಕನಸು ಮಾತ್ರ

ಪ್ರಯಾಣ ಮಧ್ಯೆ ದಿಢೀರ್ ಕಾಡಿದ ಮಾನಸಿಕ ಅಸ್ವಾಸ್ಥ್ಯವು ಆ ಹುಡುಗನ ಬದುಕಿಗೇ ಮುಳುವಾಗುತ್ತಿತ್ತು. ಆದರೆ, ನೂರಾರು ಮನೋವಿಕಲರನ್ನು ಮರಳಿ ಬದುಕಿಗೇರಿಸಿದ ಸ್ನೇಹಾಲಯದ ದಿವ್ಯದೃಷ್ಟಿಯು ಈ ಯುವಕನೆಡೆಗೆ ಬೀಳುವುದರೊಂದಿಗೆ ಐದು ತಿಂಗಳ ಬಳಿಕ ಆತ ತನ್ನೂರು, ತನ್ನವರನ್ನು ಸುರಕ್ಷಿತವಾಗಿ ಸೇರುವಂತಾದ, ಸಂಪೂರ್ಣ ಸಹಜ ಚಿತ್ತನಾಗಿ.....

ಆತ ಉತ್ತರ ಭಾರತದ ಛತ್ತೀಸ್ಗಡ ಜಾಸ್ಪುರ್ ಜಿಲ್ಲೆಯ ಪತಾಲ್ಗಾಂವ್ ತಾಲೂಕಿನ ಪ್ರೇಮ್ನಗರ ನಿವಾಸಿ 23 ರ ಹರೆಯದ ರಾಕೇಶ್ ಚೌಹಾನ್..... ಇದೇ ಕಳೆದ ಅಗೋಸ್ತು 24. ಒಂದೆರಡು ದಿನಗಳಿಂದ ಮಂಗಳೂರಿನ ಕಂಕನಾಡಿ ರೈಲು ನಿಲ್ದಾಣದಲ್ಲಿ ದಿಕ್ಕು ಗುರಿಯಿಲ್ಲದೆ ನಡೆಯುತ್ತಿರುವ ಯುವಕನನ್ನು ಗಮನಿಸಿದ ರೈಲ್ವೇ ಪೊಲೀಸರು ವಶಕ್ಕೆ ತೆಗೆದು ವಿಚಾರಣೆಗೆ ಗುರಿಪಡಿಸುತ್ತಾರೆ. ತದ್ವಿರುದ್ಧ ಹೇಳಿಕೆಗಳನ್ನು ನೀಡುತ್ತಿದ್ದ ಆತ ಮಾನಸಿಕ ಅಸ್ವಸ್ಥನೆಂಬುದು ಖಾತ್ರಿಯಾಗಿತ್ತು. ಇದರಿಂದಲೇ, ಮಾನವೀಯತೆ ಬತ್ತಿ ಹೋಗದ ಆ ಖಾಕಿಧಾರಿಗಳು ಮಂಜೇಶ್ವರ ಸ್ನೇಹಾಲಯದ ನಂಬ್ರವನ್ನು ಸಂಗ್ರಹಿಸಿ ಸ್ನೇಹಾಲಯ ಮುಖ್ಯಸ್ಥ ಜೋಸೆಫ್ ಕ್ರಾಸ್ತಾ ಅವರಿಗೆ ಯುವಕನ ಮಾಹಿತಿ ನೀಡುತ್ತಾರೆ. ತಕ್ಷಣವೇ ಸ್ನೇಹಮನೆಯ ತಂಡವು ಅಲ್ಲಿ ರೆಡಿ. ಯುವಕನನ್ನು ವಾಹನದಲ್ಲಿ ಕುಳ್ಳಿರಿಸಿ ಆಲಯಕ್ಕೆ ತರಲಾಗಿ ಮಾರನೇ ದಿನ ಮಾನಸಿಕ ಶುಶ್ರೂಷೆಗಾಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗುತ್ತದೆ. ಅಲ್ಪ ದಿನಗಳಲ್ಲಿ ಚೀತರಿಸಿದ ಆತನನ್ನು ಸ್ನೇಹಾಲಯಕ್ಕೆ ಮರಳಿಸಲಾಗಿ ಅಲ್ಲಿ ಎಲ್ಲರ ಜೊತೆ ಓಡಾಡಿ, ತಿಂದುಂಡು ಬದುಕನ್ನು ಆಸ್ವಾದಿಸುತ್ತಲೇ ಸಹಜತೆಗೆ ಬರತೊಡಗಿದ. ಪೂರ್ಣ ಸಹಜತೆ ಕಂಡುಕೊಂಡಾಗ ತನ್ನನ್ನು, ತನ್ನವರನ್ನು ನೆನಪಿಸಿದ್ದ..... ವಿಳಾಸ ನೀಡಿದ್ದ.

ಸಂಬಂಧಿಕರ ಮನೆಗೆ ತೆರಳಿದ್ದ ರಾಕೇಶನು ಅಂದು ರೈಲಿನಲ್ಲಿ ಮನೆಗೆ ಮರಳುತ್ತಿದ್ದನಂತೆ. ಆದರೆ, ಇದ್ದಕ್ಕಿದ್ದಂತೆ ಏನಾಯಿತೋ ಏನೋ, ರಾಕೇಶನಿಗೆ ಎಲ್ಲವೂ ಮರೆತು ಹೋಗಿತ್ತು. ಯಾವುದೋ ರೈಲನ್ನೇರಿದ್ದ... ಹಾಗೆ ಬಂದಿಳಿದದ್ದು ಕಂಕನಾಡಿ ನಿಲ್ದಾಣದಲ್ಲಿ... ದಿಕ್ಕು - ಗುರಿ ಗೊತ್ತಿಲ್ಲದ ಪಯಣವಾಗಿದ್ದರೂ ಆತ ಬಂದಿಳಿದದ್ದು ಸರಿಯಾದ ಸ್ಥಳದಲ್ಲೇ ಆಗಿದೆ ಎನ್ನಲೇಬೇಕು. ಇಲ್ಲವಾದಲ್ಲಿ ಆತ ಸ್ನೇಹಾಲಯದ ಕಣ್ಣಿಗೆ ಬೀಳುತ್ತಿರಲಿಲ್ಲ.... ಮರುಜನ್ಮ ಹೊಂದುತ್ತಿರಲಿಲ್ಲ. ಹಾಗೆ, ಆತನನ್ನು ಮನೆಗೆ ಸೇರಿಸಲಾಯಿತು.

ಇತ್ತ, ಐದು ತಿಂಗಳ ಬಳಿಕ ಅನಿರೀಕ್ಷಿತವಾಗಿ ಮಗನ ಆಗಮನವಾದಾಗ ಆ ತಾಯ್ತಂದೆಯರ ಸಂತೋಷಕ್ಕೆ ಪಾರಮ್ಯವೇ ಇರಲಿಲ್ಲ. ಮಗನಿಗಾಗಿ ಅವರು ಹುಡುಕಾಟದ ಸ್ಥಳವಿರಲಿಲ್ಲವಂತೆ. ಅವರು ಕೂಡಾ ನಡೆದಿರುವುದನ್ನು ಕೇಳಿ ಕಣ್ಣೀರಿಳಿಸಿದರು.

 

Comments powered by CComment

Home | About | NewsSitemapTerms and Conditions / Refund Policy | Contact

Copyright ©2014 www.snehalayamangalore.com.
Powered by eCreators

Contact Us :

Snehalaya Charitable Trust (R)

Head Office :

Door No. 15 - 21 / 1307 / 2,
Mascarenhas Compound,
2nd Cross Lower Bendoor,
Near Colaco Hospital, Kankanady Post,
Mangalore - 575 002

Operational Office:

D.No.: IV - 239 / H,
Bachalike, Pavoor Post,
Manjeshwar,
Kasargod District,
Kerala - 671 323

 

 

Tel. Ph.: (Land & Fax)
04998 - 273322
Mob.: 09446547033, 9036451931
Email: [email protected]