News & Media

Emotional Reunification of Parsanth with His Family after 2.5 years

On March 29, 2024, a destitute named Parsanth was rescued from the streets of Lalbagh, Mangalore, and subsequently admitted to the Snehalaya Psycho-Social Rehabilitation Centre for Men for further care and treatment by Brother Joseph Crasta, the founder of Snehalaya. He was accompanied by Mrs. Olivia Crasta, the trustee and secretary of Snehalaya, and the Snehalaya team.
 
After receiving essential care and treatment at Snehalaya, Parsanth's condition improved. It was a difficult task to find his address as he was deaf and mute. However, due to the Aadhar card camp held at Snehalaya, it was possible to trace his address. Through the hard work of the Snehalaya team, his family was contacted, and they confirmed his identity via video call.
 
On July 29, 2024, his relatives arrived at Snehalaya to take him back to his family in Parwarpar, Uttar Pradesh. He had been missing for two and a half years. The family expressed their gratitude towards Snehalaya for their selfless service to mankind.
 
ದಿನಾಂಕ 29.03.2024 ರಂದು ಸ್ನೇಹಾಲಯದ ಸಂಸ್ಥಾಪಕರಾದ ಸಹೋದರ ಜೋಸೆಫ್ ಕ್ರಾಸ್ತಾ ಮತ್ತು ಸ್ನೇಹಾಲಯದ ಟ್ರಸ್ಟಿ ಅಂತೆಯೇ ಕಾರ್ಯದರ್ಶಿಯಾದ ಶ್ರೀಮತಿ ಒಲಿವಿಯಾ ಕ್ರಾಸ್ತಾರವರು ಮಂಗಳೂರಿನ ಲಾಲ್ಬಾಗ್ ಬಳಿಯ ಬೀದಿಯಿಂದ ಪರಶಾಂತ್ ಎಂಬ ಮಾನಸಿಕ ಅಸ್ವಸ್ಥ ವ್ಯಕ್ತಿಯನ್ನು ರಕ್ಷಿಸಿ ಮಂಜೇಶ್ವರದ ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಿದ್ದರು.
ಈ ವ್ಯಕ್ತಿಯು ದಾಖಲಾತಿಯ ಸಮಯದಲ್ಲಿ ಮಾನಸಿಕ ಸಮಸ್ಯೆಯಿಂದ ಬಳಲುತಿದ್ದ ಹಾಗು ಕೊಳಕಾದ ಬಟ್ಟೆಯನ್ನು ಧರಿಸಿದ್ದ.ಸ್ನೇಹಾಲಯದ ಚಿಕಿತ್ಸೆ ಮತ್ತು ಆರೈಕೆಯಿಂದ ಆತನ ಆರೋಗ್ಯದಲ್ಲಿ ಸುಧಾರಣೆ ಕಂಡುಬಂತು ಆದರೆ ಆತ ಕಿವುಡ ಮತ್ತು ಮೂಖನಾಗಿದ್ದ ಕಾರಣ ಆತನ ವಿಳಾಸವನ್ನು ಪತ್ತೆಹಚ್ಚುವುದು ಸ್ನೇಹಾಲಯ ತಂಡಕ್ಕೆ ಒಂದು ಸವಾಲಾಗಿತ್ತು. 
 
ಸ್ನೇಹಾಲಯ ಮತ್ತು ಮಂಗಳೂರಿನ ಆಧಾರ್ ಸೇವಾ ಕೇಂದ್ರದ ಜಂಟಿ ಸಹಯೋಗದಲ್ಲಿ ಸ್ನೇಹಾಲಯದ ನಿವಾಸಿಗಳಿಗೆ ಆಧಾರ್ ಶಿಬಿರವನ್ನು ಏರ್ಪಡಿಸಲಾಗಿತ್ತು, ಮತ್ತು ಇದರ ಫಲವಾಗಿ ಸುಮಾರು 36 ನಿವಾಸಿಗಳ ವಿಳಾಸವನ್ನು ಪತ್ತೆಹಚ್ಚಲು ಸಾಧ್ಯವಾಯಿತು.ಈ ನಡುವೆ ಪರಶಾಂತ್ ವಿಳಾಸವು ಸಿಕ್ಕಿತು, ತಕ್ಷಣ ಆತನ ಕುಟುಂಬವನ್ನು ಸಂಪರ್ಕಿಸಿದ ಸ್ನೇಹಾಲಯದ ಸಿಬ್ಬಂದಿಗಳು, ವಿಡಿಯೋ ಕಾಲ್ ಮುಖಾಂತರ ಕುಟುಂಬದವರೊಂದಿಗೆ ಮಾತುಕತೆ ನಡೆಸಿದರು.
 
ದಿನಾಂಕ 29/07/2024ರಂದು ಆತನ ದೂರ ಸಂಭಂದಿಗಳು ಸ್ನೇಹಾಲಯಕ್ಕೆ ಆಗಮಿಸಿ ಆತನನ್ನು ಉತ್ತರ ಪ್ರದೇಶದ ಪರ್ವಾರ್ಪರ್ ಜಿಲ್ಲೆಗೆ ಕೊಂಡೊಯ್ದರು. ಕುಟುಂಬಿಕರ ಪ್ರಕಾರ ಆತ ಕಳೆದ ಎರಡುವರೆ ವರ್ಷದಿಂದ ನಾಪತ್ತೆಯಾಗಿದ್ದ.ಈ ಪುಣ್ಯಕಾರ್ಯಕ್ಕೆ ಸಹಕರಿಸಿದ ಸ್ನೇಹಾಲಯ ಸಂಸ್ಥೆಗೆ ಕುಟುಂಬದವರು ತುಂಬು ಹೃದಯದ ಕೃತಜ್ನತೆಗಳನ್ನು ಸಲ್ಲಿಸಿದರು.

 

1 Comments
  • suresh kumar
    Aug 01, 2024

    Great job Snehalaya and team Words are not enough to appreciate your efforts...

Leave a Comment