Emotional Reunification of Shakunthala after 3 months
21.07.2024: Shakunthala, a woman who was rescued from the streets of Milagres, reunites with her son after three months of separation. On April 28, 2024, Sarita Crasta, the trustee of Snehalaya, along with the Snehalaya team, rescued and admitted Shakunthala, 59 years old and suffering from mental illness, to Snehalaya Psycho Social Rehabilitation Home for Women for further care and treatment.
Finding her address was a challenging task for the Snehalaya team, but at the right time, her Aadhaar card was found out by Adhar seva Kendra which helped to locate her address and trace her family. The Snehalaya team found that she hails from Ankola, Karnataka. Her son, Gowrish, immediately arrived at Snehalaya. He was very happy to see his mother and became emotional. Gowrish had searched for her in many parts of Karnataka, including Mangalore, Bangalore, and in many other orphanages. He thanked Snehalaya for their selfless effort in this reunion.
ಜುಲೈ 21, 2024 ರಂದು ಮಂಜೇಶ್ವರದಲ್ಲಿರುವ ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರದಲ್ಲಿ ಒಂದು ಹ್ರದಯ ಸ್ಪರ್ಶಿಸುವ ಪುನರ್ಮಿಲನ ನಡೆಯಿತು. ಏಪ್ರಿಲ್ 28, 2024 ರಂದು ಮಂಗಳೂರಿನ ಮಿಲಾಗ್ರೀಸ್ ಬಳಿಯಿಂದ ಶಕುಂತಲಾ ಎಂಬ ಸುಮಾರು 59 ವರ್ಷ ಪ್ರಾಯದ ಮಾನಸಿಕ ಖಿನ್ನತೆಯಿಂದ ಬಳಲುತಿದ್ದ ಮಹಿಳೆಯನ್ನು ಸ್ನೇಹಾಲಯದ ಟ್ರಸ್ಟಿಯಾದ ಸರಿತಾ ಕ್ರಾಸ್ತಾ ಮತ್ತು ಸ್ನೇಹಾಲಯ ತಂಡದವರು ರಕ್ಷಿಸಿ ಮುಂದಿನ ಆರೈಕೆ ಮತ್ತು ಚಿಕಿತ್ಸೆಗಾಗಿ ಸ್ನೇಹಾಲಯದ ಮಹಿಳೆಯರ ವಿಭಾಗಕ್ಕೆ ದಾಖಲಿಸಿದ್ದರು.
ಪ್ರಾರಂಭದಲ್ಲಿ ತನ್ನ ಊರು ಕಾರವಾರ ಎನ್ನುತ್ತಿದ್ದ ಶಕುಂತಲಾಳ ಸರಿಯಾದ ವಿಳಾಸವನ್ನು ಪತ್ತೆಹಚ್ಚುವುದು ಸ್ನೇಹಾಲಯ ತಂಡಕ್ಕೆ ಸವಾಲಾಗಿ ಏರ್ಪಟ್ಟಿತ್ತು ಆದರೆ ಸ್ನೇಹಾಲಯದಲ್ಲಿ ನಡೆದ ಆಧಾರ್ ಕಾರ್ಡ್ ಶಿಬಿರದ ಫಲವಾಗಿ ಆಕೆಯ ವಿಳಾಸವನ್ನು ಪತ್ತೆಹಚ್ಚಲು ಸಾಧ್ಯವಾಯಿತು. ಆಧಾರ್ ಕಾರ್ಡ್ನಲ್ಲಿದ್ದ ಫೋನ್ ನಂಬರಿನಿಂದ ಆಕೆಯ ಮಗನಿಗೆ ಸಂಪರ್ಕಿಸಲು ಸಾಧ್ಯವಾಯಿತು.ಈ ಸುದ್ದಿ ತಿಳಿದ ತಕ್ಷಣ ಆಕೆಯ ಮಗ ಗೌರಿಶ್ ಅಂಕೋಲಾದಿಂದ ಮಂಜೇಶ್ವರದ ಸ್ನೇಹಾಲಯಕ್ಕೆ ಆಗಮಿಸಿದ.
3 ತಿಂಗಳ ಬಳಿಕ ತಾಯಿಯನ್ನು ನೋಡಿದ ಆತ ತುಂಬಾ ಭಾವುಕನಾದನು.ಗೌರಿಶ್ ಎರಡು ತಿಂಗಳಿನಿಂದ ಬೆಂಗಳೂರು, ಮಂಗಳೂರು ಮುಂತಾದ ಊರುಗಳು ಅಂತೆಯೇ ವಿವಿಧ ಅನಾಥಾಶ್ರಮಗಳಲ್ಲಿ ಆಕೆಯ ಹುಡುಕಾಟವನ್ನು ನಡೆಸಿದ್ದಾದರು ಯಾವುದೇ ಫಲ ಸಿಗಲಿಲ್ಲ, ಕೊನೆಗೆ ಸ್ನೇಹಾಲಯದಲ್ಲಿ ಅವನ ಹುಡುಕಾಟ ಕೊನೆಗೊಂಡಿತು. ಈ ಪುನರ್ಮಿಲನ ಕಾರ್ಯಕ್ಕೆ ಸಹಕರಿದ ಸ್ನೇಹಾಲಯ ಸಂಸ್ಥೆಗೆ ತನ್ನ ತುಂಬು ಹೃದಯದ ಕೃತಜ್ನತೆಗಳನ್ನು ಸಲ್ಲಿಸಿದನು.
ಈ ಸಂಧರ್ಭದಲ್ಲಿ ಉಪಸ್ಥಿತರಿದ್ದ ಸ್ನೇಹಾಲಯದ ಟ್ರಸ್ಟಿ ಮತ್ತು ಕಾರ್ಯದರ್ಶಿಯಾದ ಶ್ರೀಮತಿ ಒಲಿವಿಯಾ ಕ್ರಾಸ್ತಾರವರು ಈ ಕುಟುಂಬಕ್ಕೆ ಶುಭಹಾರೈಸಿದರು.
Leave a Comment