News & Media

Paramar reunited with his family after 15 years in Madhya Pradesh

On January 18, 2024, a person named Paramar, approximately 65 years old, was found wandering on the streets of Manihalla, Bantwal Taluk. He was subsequently rescued and admitted to the Snehalaya Psychosocial Rehabilitation Centre for Men by Mr. Hidayathulla of City Ambulance Service, Bantwal, along with his friends.
 
After receiving treatment at Snehalaya and participating in counseling sessions, Paramar began to disclose his whereabouts. For further reunion efforts, he was shifted to Shraddha Mumbai.
 
On April 3, 2024, he was successfully reunited with his family in Shivapuri, Madhya Pradesh. His family was overjoyed to see him after 15 years of separation. According to the family, he had been suffering from mental illness for the past 17 years and had one day left home without informing anyone.
 
The family expressed their gratitude towards both the Snehalaya and Shraddha Centres for their selfless service.
 
ದಿನಾಂಕ 18.01.2024ರಂದು ಬಂಟ್ವಾಳ ತಾಲೂಕಿನ, ಮಣಿಹಳ್ಳದ ಬೀದಿಯಲ್ಲಿ ದಿಕ್ಕುತೋಚದೆ ಅಲೆದಾಡುತಿದ್ದ ಪರಮಾರ್ ಎಂಬ ಸುಮಾರು 65 ವರ್ಷ ಪ್ರಾಯದ ವ್ಯಕ್ತಿಯನ್ನು ಬಂಟ್ವಾಳದ ಸಿಟಿ ಆಂಬ್ಯುಲೆನ್ಸ್ ಸರ್ವಿಸ್ ನ ಹಿದಾಯತುಲ್ಲಾ ಮತ್ತು ಅವರ ಸಂಗಡಿಗರು ರಕ್ಷಿಸಿ ಮಂಜೇಶ್ವರದ ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಿದ್ದರು.
ಮಾನಸಿಕ ಅಸ್ವಸ್ಥತೆಯಿಂದ ಬಳಲುತಿದ್ದ ಈ ವ್ಯಕ್ತಿಯು ಸ್ನೇಹಾಲಯದ ಚಿಕಿತ್ಸೆ ಮತ್ತು ಆರೈಕೆಯಿಂದ ತನ್ನ ಆರೋಗ್ಯದಲ್ಲಿ ಕ್ರಮೇಣ ಸುಧಾರಣೆ ಕಂಡುಕೊಂಡನು ಅಂತೆಯೆ ಮುಂದಿನ ಪುನರ್ಮಿಲನ ಪ್ರಕ್ರಿಯೆಗಾಗಿ ಆತನನ್ನು ಮುಂಬೈಯ ಶೃದ್ಧಾ ಕೇಂದ್ರಕ್ಕೆ ವರ್ಗಾಯಿಸಲಾಯಿತು.
ದಿನಾಂಕ 03.04.2024 ರಂದು ಮಧ್ಯಪ್ರದೇಶದ ಶಿವಪುರಿಯಲ್ಲಿ ಆತನ ಪುನರ್ಮಿಲನವಾಯಿತು. ಹದಿನೈದು ವರ್ಷದ ಬಳಿಕ ಮನೆಗೆ ಮರಳಿದ ಆತನನ್ನು ನೋಡಿ ಆತನ ತಾಯಿ, ಸಹೋದರ ಸಹೋದರಿಯರು ಖುಷಿಪಟ್ಟರು. ಕಳೆದ ಹದಿನೇಳು ವರ್ಷದಿಂದ ಮಾನಸಿಕ ಅಸ್ವಸ್ಥತೆಯಿಂದ ಬಳಲುತಿದ್ದ ಆತ ಹೇಳದೆ ಮನೆಯಿಂದ ನಾಪತ್ತೆಯಾಗಿದ್ದನು. ಕುಟುಂಬಿಕರು ಈ ಪುಣ್ಯ ಕಾರ್ಯಕ್ಕೆ ಸಹಕರಿಸಿದ ಸ್ನೇಹಾಲಯ ಮತ್ತು ಶೃದ್ಧಾ ಸಂಸ್ಥೆಗಳಿಗೆ ತುಂಬು ಹೃದಯದ ಕೃತಜ್ನತೆಗಳನ್ನು ಸಲ್ಲಿಸಿದರು.
 
 
Leave a Comment