News & Media

Rescue of Savithri Shetty from Kuloor, Mangalore

On 30th July 2024, an elderly woman named Savithri Shetty, who suffers from mental illness and was living in a house with fallen walls that was not suitable for habitation near Kuloor, Mangalore, was rescued by Bro Joseph Crasta, the founder of Snehalaya, with the assistance of the Senior Citizen Helpline staff, the village officer of Kuloor, and the local police.

This woman had been staying in that house despite her relatives living nearby, who had offered her a place to stay. However, due to her mental illness, she refused their help. The village officer noticed the situation and contacted the Senior Citizen Helpline located at the DC office in Mangalore. The Helpline team then reached out to Bro Joseph Crasta, and the rescue operation was carried out

 

ದಿನಾಂಕ 30.07.2024 ರಂದು ಸ್ನೇಹಾಲಯದ ಸಂಸ್ಥಾಪಕರಾದ ಸಹೋದರ ಜೋಸೆಫ್ ಕ್ರಾಸ್ತಾರವರು ಕೂಳೂರಿನ ಬಳಿ ಗೋಡೆ ಕುಸಿದು ಛಾವಣಿ ಬೀಳುವ ಸ್ಥಿತಿಯಲ್ಲಿದ್ದ ಮನೆಯಲ್ಲಿ ವಾಸವಿದ್ದ ಸುಮಾರು 61ವರ್ಷ ಪ್ರಾಯದ ಸಾವಿತ್ರಿ ಶೆಟ್ಟಿ ಎಂಬ ಮಾನಸಿಕ ಅಸ್ವಸ್ಥ ವೃದ್ಧೆಯನ್ನು, ಮಂಗಳೂರಿನ ಹಿರಿಯ ನಾಗರಿಕರ ಇಲಾಖೆಯ ಸಿಬ್ಬಂದಿಗಳು ಮತ್ತು ಕೂಳೂರಿನ ಗ್ರಾಮಾಧಿಕಾರಿಯ ಸಹಾಯದಿಂದ ರಕ್ಷಿಸಿ, ಮುಂದಿನ ಆರೈಕೆ ಮತ್ತು ಚಿಕಿತ್ಸೆಗಾಗಿ ಮಂಜೇಶ್ವರದ ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರದ ಮಹಿಳೆಯರ ವಿಭಾಗಕ್ಕೆ ದಾಖಲಿಸಲಾಯಿತು.

ಸಾವಿತ್ರಿ ಈ ಮನೆಯಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿದ್ದು ಹತ್ತಿರದಲ್ಲಿ ಆಕೆಯ ಸಂಬಂದಿಕರ ಮನೆಯಿದ್ದು, ಅವರು ಅಲ್ಲಿ ಬಂದು ವಾಸಿಸಲು ಕರೆದಿದ್ದರು ಆಕೆಯು ಒಪ್ಪುತ್ತಿರಲಿಲ್ಲ, ಈ ವಿಷಯ ತಿಳಿದ ಅಲ್ಲಿಯ ಗ್ರಾಮಾಧಿಕಾರಿ, ಮಂಗಳೂರಿನ ಹಿರಿಯ ನಾಗರಿಕರ ಇಲಾಖೆಯವರನ್ನು ಸಂಪರ್ಕಿಸಿ ಅವರ ಮುಖಾಂತರ ಸ್ನೇಹಾಲಯದವರು ಸ್ಥಳಿಯ ಪೋಲಿಸರ ಸಹಾಯದಿಂದ ಈ ರಕ್ಷಣೆ ಕಾರ್ಯವನ್ನು ನಡೆಸಿದರು.
 

 

 

Leave a Comment