News & Media

Snehalaya witnessed a joyful reunion of our Resident Mrs. Maya at Madhya Pradesh

Snehalaya witnessed a joyful reunification of Mrs. Maya at Indore Madhya Pradesh. A patient named Maya was Rescued by our Trustee Mrs. Olivia Crasta and Snehalaya Team from Kumbla Street. She was found wandering on the streets Kumbla, Kasargod. The Psychiatric counsellors and medical team managed to give her the appropriate attention and support.
In addition to the medication, she was urged to take part in our various therapeutic activities and counselling sessions. Once she has improved in her condition, we have Shifted her to Shraddha Rehabilitation Foundation Bombay for the further reunification Process. An on 30/01/2024 she was Reunited with her Family at Madya Pradesh for a Happy Living. She was really delighted and happy as she is back to her abode. The Family Members acknowledged Snehalaya Psycho-social Rehabilitation Center for Women for  Rescuing her from the street and thanked Shraddha for Bringing her Home.
 
ದಿನಾಂಕ 01.12.2023 ರಂದು ಕಾಸರಗೋಡಿನ ಕುಂಬಳೆಯ ಬೀದಿಯಲ್ಲಿ ಅಲೆದಾಡುತಿದ್ದ ಮಾಯಾ ಎಂಬ ಮಹಿಳೆಯನ್ನು ಸ್ನೇಹಾಲಯದ ಟ್ರಸ್ಟಿ ಹಾಗು ಕಾರ್ಯದರ್ಶಿಯಾದ ಶ್ರೀ ಒಲಿವಿಯಾ ಕ್ರಾಸ್ತಾರವರು ರಕ್ಷಿಸಿ ಮುಂದಿನ ಆರೈಕೆ ಮತ್ತು ಚಿಕಿತ್ಸೆಗಾಗಿ ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೆಂದ್ರಕ್ಕೆ ದಾಖಲಿಸಿದರು.
ದಾಖಲಾತಿಯ ಸಮಯದಲ್ಲಿ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಮಾಯಾ, ಶಾರೀರಿಕ ನೈರ್ಮಲ್ಯವಿಲ್ಲದೆ ಕೊಳಕಾದ ಬಟ್ಟೆಯನ್ನು ಧರಿಸಿದ್ದಳು. ಸ್ನೇಹಾಲಯದ ಆರೈಕೆಯಿಂದ ಆಕೆಯ ಆರೋಗ್ಯದಲ್ಲಿ ಕ್ರಮೇಣ ಸುಧಾರಣೆ ಕಂಡುಬಂತು ಮತ್ತು ಆಪ್ತ ಸಮಾಲೋಚನೆಯಲ್ಲಿ ತನ್ನ ಕುಟುಂಬದ ವಿವರಗಳನ್ನು ಹಂಚಿಕೊಂಡಳು. ಮುಂದಿನ ಪುನರ್ಮಿಲನ ಪ್ರಕ್ರಿಯೆಗಾಗಿ ಅವಳನ್ನು ಮುಂಬೈಯ ಶ್ರದ್ಧಾ ಕೆಂದ್ರಕ್ಕೆ ದಾಖಲಿಸಲಾಯಿತು. 
ದಿನಾಂಕ 31.01.2024 ರಂದು ಮಧ್ಯಪ್ರದೇಶದ ಇಂದೋರ್ ನಲ್ಲಿರುವ ಆಕೆಯ ಕುಟುಂಬದೊಂದಿಗೆ ಪುನರ್ಮಿಲನವಾಯಿತು. ಆಕೆಯ ಕುಟುಂಬಿಕರು ಆದರದ ಸ್ವಾಗತ ನೀಡಿದರು. ಮಾಯಾಳಿಗೆ ಒಬ್ಬ ಮಗ ಮತ್ತು ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಕುಟುಂಬದ ಆರ್ಥಿಕ ಸ್ತಿಥಿಯು ಕೆಟ್ಟದಾಗಿದ್ದು ಶ್ರದ್ದಾ ತಂಡವು ಎರಡು ತಿಂಗಳ ಔಷಧಿ ಮತ್ತು ಚಿಕಿತ್ಸಾ ಯೋಜನೆಯನ್ನು ನೀಡಿತು. ಕುಟುಂಬಿಕರು ಈ ಪುನರ್ಮಿಲನ ಕಾರ್ಯಕ್ಕೆ ಸಹಕರಿಸಿದ ಸ್ನೇಹಾಲಯ ಮತ್ತು ಶ್ರದ್ಧಾ ಸಂಸ್ಥೆಗಳಿಗೆ ತುಂಬು ಹೃದಯದ ಕೃತಜ್ನತೆಗಳನ್ನು ಸಲ್ಲಿಸಿತು.
Leave a Comment