News & Media

Srinivas reunited with his family at Andhra Pradesh

A destitute named Shrinivas was rescued from the streets of Madanthyar and was admitted to Snehalaya Psycho Social Rehabilitation center by a Social Worker named Stephan. During the time of admission, the patient was shabbily dressed and lacked hygiene, with poor memory, restlessness, and disturbed sleep.
Through meditation, yoga, therapeutic activities, and therapies, as well as through vocational and occupational training and counseling he has improved his Physical and Mental health. During the Counselling Session, he shared his family details and whereabouts and for further reunion process, he was shifted to Shraddha Mumbai.
On 06/11/2022 he was reunited with his family in Andhra Pradesh, and his mother received him. According to his family, Srinivas was missing for 1 year. He was under mental treatment at Vishakhapatnam hospital but he did not recover completely. His family condition is very poor. He was provided with 2 months of medicine and a treatment plan. The entire family thanked Snehalaya and Shraddha team for their selfless efforts.
 
ಮಡಂತ್ಯಾರ್‌ನ ಬೀದಿಯಲ್ಲಿದ್ದ ಶ್ರೀನಿವಾಸ್ ಎಂಬ ನಿರಾಶ್ರೀತನನ್ನು ಸ್ಟೀಫನ್ ಎಂಬ ಸಾಮಾಜಿಕ ಸೇವಾ ಕಾರ್ಯಕರ್ತರು ರಕ್ಷಿಸಿ, ಮಂಜೇಶ್ವರದ ಸ್ನೇಹಾಲಯಕ್ಕೆ ದಾಖಲಿಸಿದರು.ದಾಖಾಲಾತಿಯ ಸಮಯದಲ್ಲಿ ಶ್ರೀನಿವಾಸ್ ಕೊಳಕಾದ ಉಡುಪು ಧರಿಸಿದ್ದರು ಮತ್ತು ಶಾರೀರಿಕ ನೈರ್ಮಲ್ಯವಿಲ್ಲದ ಸ್ಥಿತಿಯಲ್ಲಿದ್ದರು, ಜ್ನಾಪಕ ಶಕ್ತಿಯ ತೊಂದರೆ, ನಿದ್ರಾ ಹೀನತೆ ಮುಂತಾದ ಸಮಸ್ಯೆಗಳಿಂದ ಬಳಲುತ್ತಿದ್ದರು.
ಧ್ಯಾನ, ಯೋಗ, ಚಿಕಿತ್ಸಕ ಚಟುವಟಿಕೆಗಳು ಮತ್ತು ವೈದ್ಯಕೀಯ ಚಿಕಿತ್ಸೆಯ ಜೊತೆಗೆ ವೃತ್ತಿಪರ ಹಾಗು ಔದ್ಯೋಗಿಕ ತರಬೇತಿ, ಸಮಾಲೋಚನೆಯ ಮೂಲಕ ಅವರ  ದೈಹಿಕ ಮತ್ತು ಮಾನಸಿಕ ಅರೋಗ್ಯದಲ್ಲಿ ಕ್ರಮೇಣ ಸುಧಾರಣೆ ಕಂಡುಬಂದಿತು. ಆಪ್ತ ಸಮಾಲೋಚನೆಯ ಸಮಯದಲ್ಲಿ, ಅವರು ತಮ್ಮ ಕುಟುಂಬದ ವಿವರಗಳನ್ನು ಹಂಚಿಕೊಂಡರು. ಮುಂದಿನ ಪುನರ್ಮಿಲನ ಪ್ರಕ್ರಿಯೆಗಾಗಿ, ಅವರನ್ನು   ಮುಂಬೈಯ ಶೃದ್ದಾಕ್ಕೆ  ಸ್ಥಳಾಂತರಿಸಲಾಯಿತು.
ದಿನಾಂಕ 06/11/2022 ರಂದು ಅವರು ಆಂಧ್ರಪ್ರದೇಶದಲ್ಲಿರುವ ಅವರ ಕುಟುಂಬದೊಂದಿಗೆ ಮತ್ತೆ ಸೇರಿಕೊಂಡರು ಮತ್ತು ಅವರ ತಾಯಿ ಅವರನ್ನು ಆದರದಿಂದ ಬರಮಾಡಿಕೊಂಡರು. ಮನೆಯವರ ಹೇಳಿಕೆಯ  ಪ್ರಕಾರ ಶ್ರೀನಿವಾಸ್ ನಾಪತ್ತೆಯಾಗಿ ಒಂದು ವರ್ಷವಾಗಿತ್ತು. ಅವರು ವಿಶಾಖಪಟ್ಟಣಂ ಆಸ್ಪತ್ರೆಯಲ್ಲಿ ಮಾನಸಿಕ ಚಿಕಿತ್ಸೆ ಪಡೆಯುತ್ತಿದ್ದರು .ಅವರ ಕುಟುಂಬದವರು ಕಡು ಬಡವರಾಗಿದ್ದಾರೆ. ಅವರಿಗೆ 2 ತಿಂಗಳ ಔಷಧಿ ಮತ್ತು ಚಿಕಿತ್ಸಾ ಯೋಜನೆಯನ್ನು ಒದಗಿಸಲಾಯಿತು. ಶ್ರೀನಿವಾಸ್ ರವರನ್ನು ತನ್ನ ಕುಟುಂಬದೊಂದಿಗೆ ಒಂದುಗೂಡಿಸುವ ನಿಸ್ವಾರ್ಥ ಸೇವೆಗಾಗಿ ಅವರ ಕುಟುಂಬವು ಸ್ನೇಹಾಲಯ ಮತ್ತು ಶ್ರದ್ಧಾ ಫೌಂಡೇಶನ್‌ಗೆ ಧನ್ಯವಾದಗಳನ್ನು ಅರ್ಪಿಸಿತು.
1076 Comments
Leave a Comment